ಹಂಪಾಪುರ: ಶೀಂಡೇನಹಳ್ಳಿ ಸೇರಿದಂತೆ ಅಕ್ಕಪಕ್ಕದ ಆರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 17 ಕೆರೆಗಳಿದ್ದು, ಅದರಲ್ಲಿ 11 ಕೆರೆಗಳಿಗೆ ಮಾತ್ರ ನೀರು ತುಂಬಿಸಿದ್ದು ಉಳಿದ ಆರು ಕೆರೆಗಳಿಗೆ ತುಂಬಿಸದ ಕಾರಣ ರೈತರಿಗೆ ತೊಂದರೆ ಆಗಿದೆ ಎಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕೆರೆಗಳನ್ನು ತುಂಬಿಸಲು ಮುಂದಾಗಿದ್ದಾರೆ. ಕೆರೆಯನ್ನು ಸಂಪೂರ್ಣ ತುಂಬಿಸಲು ಕ್ರಮ ಕೈಗೊಂಡಿದ್ದೇವೆ, ಈ ಸಂಬಂಧ ರೈತರು ಪ್ರತಿಭಟನೆ ಮಾಡಬಾರದು ಎಂದು ಗ್ರಾಮಸ್ಥರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಶೀಂಡೇನಹಳ್ಳಿ ಯತೀಶ್ ಮಾತನಾಡಿ, ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪತ್ರಿಕೆಯಲ್ಲಿ ಬಂದ ಬಳಿಕ ಗ್ರಾಮದ ಕೆರೆಗೆ ನೀರನ್ನು ಹರಿಸಿದ್ದಾರೆ, ಗ್ರಾಮದ ಕೆರೆ ಸಂಪೂರ್ಣವಾಗಿ ತುಂಬುವವರೆಗೂ ಮತ್ತು ಉಳಿದ ಅಕ್ಕಪಕ್ಕದ ಗ್ರಾಮಗಳು ಭರ್ತಿಯಾಗುವವರೆಗೂ ಸಹ ನಮ್ಮ ಪ್ರತಿಭಟನೆಯ ತೀರ್ಮಾನವನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಸಮಸ್ಯೆ ಕುರಿತು ವರದಿ ಪ್ರಕಟಿಸಿದ ‘ಪ್ರಜಾವಾಣಿ’ಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.