ಮೈಸೂರು: ‘ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸದೇ ಎಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದಾರೆ’ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಭವನದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

‘ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಜನತೆ ಗೆಲ್ಲಿಸಿದ ಮಾರನೇ ದಿನವೇ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆಂದು ಒಪ್ಪಿಸಿ, ಮತ ಪಡೆದು ಗೆದ್ದ ನಂತರ ಯೋಜನೆಗೆ ಅನುಮತಿ ಕೊಡಿಸುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ’ ಎಂದು ದೂರಿದರು.

‘ಈ ಯೋಜನೆಗಾಗಿ ರಾಜ್ಯ ಸರ್ಕಾರವು ಭೂಮಿ ಸರ್ವೆ, ಮರಗಳ ಎಣಿಕೆಗೆ ಚಾಲನೆ ನೀಡಿ, ಡಿಪಿಆರ್ ಸಿದ್ಧಪಡಿಸಿದೆ. ಕೂಡಲೇ ಅನುಮತಿ ಕೊಡಿಸಿ’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಗರ ಘಟಕದ ವಕ್ತಾರ ಎಸ್. ರಾಜೇಶ್ ನೇತೃತ್ವ ವಹಿಸಿದ್ದರು. ಮುಖಂಡರಾದ ಮರಿದೇವಯ್ಯ, ನಾಗೇಶ್, ನಟರಾಜ್, ಸೈಯದ್ ಫಾರೂಕ್, ಶಿವಶಂಕರಮೂರ್ತಿ, ಸುನಿಲ್ ನಾರಾಯಣ್, ರಾಜಶೇಖರ್, ಎಸ್.ಎ. ರಹೀಂ, ಲೋಕೇಶ್ ಕುಮಾರ್, ಮೋಹನ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.