ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್‌ ಚುನಾವಣೆ | ನೈರುತ್ಯ ಪದವೀಧರರ ಕ್ಷೇತ್ರ: ಧನಂಜಯ ಸರ್ಜಿಗೆ ಜಯ

Published 6 ಜೂನ್ 2024, 19:25 IST
Last Updated 6 ಜೂನ್ 2024, 19:25 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿಯ ಧನಂಜಯ ಸರ್ಜಿ ಭಾರಿ ಅಂತರದಿಂದ ಜಯ ಸಾಧಿಸಿದರು.

ಅಂತಿಮ ಸುತ್ತಿನ ವೇಳೆಗೆ 37,627 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರನ್ನು 24,111 ಮತಗಳ ಅಂತರದಿಂದ ಸೋಲಿಸಿದರು. ಮಂಜುನಾಥ್ 13,516 ಮತ ಪಡೆದರು.

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್‌ 703೯ ಮತ ಗಳಿಸಿದರು. 66,497 ಸಾವಿರ ಮತಗಳ ಎಣಿಕೆ ಮಾಡಿದ್ದು. 5115 ಮತಗಳು ತಿರಸ್ಕೃತಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT