ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಕುಟುಂಬದ ಆಸ್ತಿ ₹124.65 ಕೋಟಿ!

Published 16 ಮೇ 2024, 15:56 IST
Last Updated 16 ಮೇ 2024, 15:56 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಕೆ. ವಿವೇಕಾನಂದ ಅವರ ಕುಟುಂಬದ ಒಟ್ಟು ಆಸ್ತಿ ಬರೋಬ್ಬರಿ ₹124.65 ಕೋಟಿ!

ವಿವೇಕಾನಂದರ ಬಳಿ ಒಟ್ಟು ₹16.09 ಕೋಟಿ ಮೌಲ್ಯದ ಚರಾಸ್ತಿ ಇದೆ. ಒಂದು ಔಡಿ ಕಾರ್, ಎರಡು ರಾಯಲ್‌ ಎನ್‌ಫೀಲ್ಡ್‌ ಬೈಕ್ ಇವೆ. 1.5 ಕೆ.ಜಿ. ಚಿನ್ನ ಹಾಗೂ 30 ಕೆ.ಜಿ.ಯಷ್ಟು ಬೆಳ್ಳಿ ಹೊಂದಿದ್ದಾರೆ. ಅವರ ಪತ್ನಿ ಕೆ.ಎಂ. ಗೀತಾ ₹ 61 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದು, ಮರ್ಸಿಡಿಸ್ ಬೆಂಜ್‌ ಕಾರ್‌, 1 ಕೆ.ಜಿ. ಚಿನ್ನ ಹಾಗೂ 10 ಕೆ.ಜಿ. ಬೆಳ್ಳಿ ಅವರ ಬಳಿ ಇದೆ.

ಸ್ಥಿರಾಸ್ತಿ: ವಿವೇಕಾನಂದರ ಒಟ್ಟು ಸ್ಥಿರಾಸ್ತಿ ಮೌಲ್ಯ ₹ 101.85 ಕೋಟಿ. ಮೈಸೂರು ತಾಲ್ಲೂಕಿನ ಮೈದನಹಳ್ಳಿ, ಹುಸೇನ್‌ ಪುರ ಹಾಗೂ ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಬಳಿ ಒಟ್ಟು ₹ 22.20 ಕೋಟಿ ಮೌಲ್ಯದ 11 ಎಕರೆ 33 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಮೈಸೂರು, ಮಂಡ್ಯ ಜಿಲ್ಲೆಯ ವಿವಿಧೆಡೆ ₹ 69.65 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಮೈಸೂರಿನ ವಿ.ವಿ. ಮೊಹಲ್ಲಾದಲ್ಲಿ ₹ 8 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, ಮೈಸೂರಿನ ವಿಜಯನಗರ ಹಾಗೂ ಬೆಂಗಳೂರಿನ ಎಸ್‌ವಿವಿ ಲೇಔಟ್‌ನಲ್ಲಿ 2 ವಾಸದ ಮನೆಗಳಿವೆ.

ಅವರ ಮಡದಿ ಬಳಿ ₹6.10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಪಾಂಡವಪುರದಲ್ಲಿ ಕೃಷಿ ಭೂಮಿ, ಮೈಸೂರಿನ ಇಲವಾಲದಲ್ಲಿ ಕೃಷಿಯೇತರ ಭೂಮಿ, ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ವಾಣಿಜ್ಯ ಕಟ್ಟಡ, ಮೈಸೂರಿನ ಹೆಬ್ಬಾಳದಲ್ಲಿ ವಾಸದ ಮನೆ ಇದೆ.

ವಿವೇಕಾನಂದ ಅವರ ವಾರ್ಷಿಕ ಆದಾಯವೇ ₹1.04 ಕೋಟಿ ಇದೆ. ಒಟ್ಟು ₹16.42 ಕೋಟಿಯಷ್ಟು ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT