ಎಂ. ಮಹೇಶ್

ಮೈಸೂರು: ಮಕ್ಕಳನ್ನು ಮೊಬೈಲ್ ಫೋನ್ ಮೋಹದಿಂದ, ವ್ಯಸನದಿಂದ ಅಥವಾ ಅತಿಯಾದ ಬಳಕೆಯಿಂದ ಹೊರತಂದು ಸದಭಿರುಚಿ ಕಾರ್ಯಕ್ರಮದ ಭಾಗವಾಗಿ ಕಲಾ ತರಬೇತಿ ನೀಡುವ ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೊಂಡಿದೆ.

ಎಸ್ಸಿಎಸ್ಪಿ ಮತ್ತು ಟಿಎಸ್ಪಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆ)ಯಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಕಲಾ ತರಬೇತಿ ನೀಡುವ ಕಾರ್ಯಕ್ರಮವಿದು. ಇದಕ್ಕಾಗಿ ಜಿಲ್ಲೆಯ ವಿವಿಧೆಡೆ ಇರುವ ಹಾಸ್ಟೆಲ್ಗಳಲ್ಲಿ ಎಸ್ಸಿಎಸ್ಪಿಯಡಿ 25 ಹಾಗೂ ಟಿಎಸ್ಪಿಯಡಿ 20 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

ಮಾತೃಮಂಡಳಿ ವೃತ್ತದ ಸಮೀಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ದಟ್ಟಗಳ್ಳಿಯ ರಾಜರಾಜೇಶ್ವರಿನಗರದ ಹಾಸ್ಟೆಲ್ನಲ್ಲಿ ಕಲಾ ತರಬೇತಿ ನೀಡಲಾಗುವುದು. ಈ ವರ್ಷ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ಜಾನಪದ ಗೀತೆ ಗಾಯನ–ನೃತ್ಯ ತರಬೇತಿಯನ್ನು 6 ತಿಂಗಳವರೆಗೆ ಕೊಡಲಾಗುವುದು. ವಾರದಲ್ಲಿ ಮೂರು ತರಗತಿಗಳನ್ನು (ತಲಾ ಎರಡು ಗಂಟೆ) ನಡೆಸಲಾಗುವುದು. ಇದಕ್ಕಾಗಿ ಇಲಾಖೆಯು ಸಂಗೀತ ಶಿಕ್ಷಕರು ಹಾಗೂ ತಜ್ಞರ ಸಲಹೆಯಂತೆ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವರಿಗೆ ತರಬೇತಿ ನೀಡಲು ಕಲಾಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ತರಬೇತುದಾರರನ್ನಾಗಿ ದೇವಾನಂದ ವರಪ್ರಸಾದ್ ಹಾಗೂ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ತರಬೇತುದಾರರಿಗೆ ಗೌರವಧನ: ಸಮಾಜ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಜೊತೆಗೂಡಿ ವಿದ್ಯಾರ್ಥಿಗಳಿಗೆ ವಿವಿಧ ಕಲಾ ಪ್ರಕಾರಗಳನ್ನು ಪರಿಚಯವನ್ನು ಕೆಲಸವನ್ನು ಮಾಡುತ್ತಿವೆ. ಇದಕ್ಕಾಗಿ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ.

‘ಕಲಾ ತರಬೇತಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಕಲಾ ಪ್ರಾಕಾರಗಳನ್ನು ಶಾಸ್ತ್ರೀಯವಾಗಿ ಕಲಿಸಲಾಗುವುದು. ಕಲೆ, ಸಾಂಸ್ಕೃತಿಕ ಚಟುವಟಿಕೆಯತ್ತ ಅವರನ್ನು ಸೆಳೆಯುವುದು ಮುಖ್ಯ ಉದ್ದೇಶವಾಗಿದೆ. ಇಬ್ಬರು ತರಬೇತುದಾರರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. 15 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಇಬ್ಬರನ್ನು ಅನುಭವ ಆಧರಿಸಿ ಆಯ್ಕೆ ಮಾಡಲಾಗಿದೆ. ಅವರಿಗೆ ತಿಂಗಳಿಗೆ ₹ 10ಸಾವಿರದಂತೆ ಆರು ತಿಂಗಳಿಗೆ ₹ 60ಸಾವಿರ ಗೌರವಧನ ನೀಡಲಾಗುವುದು’ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮಾಣಪತ್ರ ವಿತರಣೆ: ‘ಜನವರಿ ಅಥವಾ ಫೆಬ್ರುವರಿಗೆ ತರಬೇತಿ ಪೂರ್ಣಗೊಳ್ಳಲಿದೆ. ಕಲಿತ ಮಕ್ಕಳು ಸಮಾರೋಪ ಸಮಾರಂಭದಲ್ಲಿ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು. ತರಬೇತಿ ಪಡೆದ ಬಗ್ಗೆ ಪ್ರಮಾಣಪತ್ರ ನೀಡಲಾಗುವುದು. ಕಲಿಕೆಗೆ ಬೇಕಾದ ಸಾಧನ, ಸಲಕರಣೆಗಳನ್ನು ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಮಗ್ರ ವ್ಯಕ್ತಿತ್ವ ರೂಪಿಸಲು ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗುತ್ತವೆ. ಮುಖ್ಯವಾಗಿ ಮಕ್ಕಳನ್ನು ಮೊಬೈಲ್ ಫೋನ್ಗಳಿಂದ ದೂರ ತರಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆಶಯದಂತೆ ಕಲಾ ತರಬೇತಿ ನಿಡಲಾಗುತ್ತಿದೆ. ಜಾನಪದ ಗೀತೆ, ನೃತ್ಯ, ರೂಪಕಗಳನ್ನು ಕಲಿಸಿಕೊಡಲಾಗುವುದು’ ಎಂದು ತರಬೇತುದಾರರಾದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರೂ ಆಗಿರುವ ದೇವಾನಂದ ವರಪ್ರಸಾದ್ ಪ್ರತಿಕ್ರಿಯಿಸಿದರು.

Highlights - ಎಸ್ಸಿಎಸ್ಪಿ ಮತ್ತು ಟಿಎಸ್ಪಿಯಡಿ ಕ್ರಮ ವಿವಿಧ ಹಾಸ್ಟೆಲ್ಗಳ ವಿದ್ಯಾರ್ಥಿಗಳು ಆಯ್ಕೆ ಸಾಂಸ್ಕೃತಿಕ ಚಟುವಟಿಕೆಯತ್ತ ಸೆಳೆಯುವ ಆಶಯ

Quote - ವಿದ್ಯಾರ್ಥಿಗಳನ್ನು ಮೊಬೈಲ್ ಫೋನ್ ಬಳಕೆಯಿಂದ ಹೊರತಂದು ಜಾನಪದ ಸಾಹಿತ್ಯ ಸಂಸ್ಕೃತಿಯ ಕಡೆಗೆ ಸೆಳೆಯುವುದು ತರಬೇತಿಯ ಮುಖ್ಯ ಉದ್ದೇಶ ಎಂ.ಡಿ. ಸುದರ್ಶನ್ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು

Quote - ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳು ನಾವು ನೀಡುವ ತರಬೇತಿಯಲ್ಲಿ ಕಲಿತದ್ದನ್ನು ಸಮಾರೋಪ ಸಮಾರಂಭದಲ್ಲಿ ಪ್ರಸ್ತುತಪಡಿಸುವರು ದೇವಾನಂದ ವರಪ್ರಸಾದ್ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.