ಬಾನುಲಿ ಉಪ ನಿರ್ದೇಶಕ (ಕಾರ್ಯಕ್ರಮ) ಉಮೇಶ್ ಎಸ್.ಎಸ್. ಮಾತನಾಡಿ, ‘1935ರಲ್ಲಿ ಗೋಪಾಲಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಆಕಾಶವಾಣಿಯನ್ನು ಮೈಸೂರು ಸಂಸ್ಥಾನ ಮುಂದುವರಿಸಿತ್ತು. ನಂತರ ಕೇಂದ್ರ ಸರ್ಕಾರ ಅದರ ಜವಾಬ್ದಾರಿ ತೆಗೆದುಕೊಂಡಿತು. ಕುವೆಂಪು ಅವರ ಕಾವನ ವಾಚನದ ಮೂಲಕ ಆರಂಭವಾದ ಕಾರ್ಯಕ್ರಮದ ಸರಣಿ ಅನೇಕ ಸಾಹಿತಿಗಳಿಗೆ ವೇದಿಕೆ ನೀಡಿದೆ’ ಎಂದು ತಿಳಿಸಿದರು.