ಮೈಸೂರು: ‘ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.40 ಕೋಟಿ ನಿವ್ವಳ ಲಾಭವನ್ನು ಪಡೆದಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್ ಹೇಳಿದರು.

ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ 119ನೇ ವಾರ್ಷಿಕ ಸಭೆಯಲ್ಲಿ, ‘ 33,333 ಸದಸ್ಯರನ್ನು ಹೊಂದಿರುವ ಬ್ಯಾಂಕ್ನಲ್ಲಿ ₹10,968 ಲಕ್ಷ ಸಾಲ ನೀಡಿದ್ದು, ಶೇ 10 ರಷ್ಟು ಡಿವಿಡೆಂಡ್ ನೀಡುತ್ತೇವೆ’ ಎಂದರು.

‘ನನ್ನ ಅವಧಿಯಲ್ಲಿ ಶೇ 32ರಷ್ಟಿದ್ದ ಎನ್ಪಿಎಯನ್ನು 40 ದಿನದಲ್ಲಿ ಶೇ 5.46 ಕ್ಕೆ ನಿಲ್ಲಿಸಿದ್ದೇನೆ. ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಸಹಕಾರದಿಂದ ಇದನ್ನು ಕಾರ್ಯಗತ ಮಾಡಿದ್ದೇವೆ. ಮಾರ್ಚ್ ಒಳಗೆ ವಸೂಲಾತಿ ಮಾಡಿದ್ದರ ಫಲವಾಗಿ ₹1.40 ಕೋಟಿ ಲಾಭ ತಂದಿದ್ದೇವೆ. ಎಸ್ಬಿ ಖಾತೆ ತೆರೆಯುವ ಮೂಲಕ ಯುಪಿಎ ಆನ್ಲೈನ್ ಮೂಲಕವೂ ಬ್ಯಾಂಕ್ನಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ನಾಲ್ಕು ವರ್ಷದಿಂದ ಮರಣ ನಿಧಿ ಕಟ್ಟಿಲ್ಲ. ಸದ್ಯಕ್ಕೆ ಶೇ 70ರಷ್ಟು ಮಂದಿ ₹500 ವಂತಿಗೆ ಕಟ್ಟಿದ್ದಾರೆ. ಉಳಿದವರಿಗೆ ಡಿ.31 ರವರೆಗೆ ಅವಕಾಶ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ (UPI) ಬಳಕೆ, ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು. ಸಭೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ಷೇರು ಹೊಂದಿದ ಹಿರಿಯ 119 ಮಂದಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಿರ್ದೇಶಕರಾದ ಎಸ್.ಬಿ.ಎಂ.ಮಂಜು, ಎನ್.ಯೋಗನಂದ, ಜಿ.ನಿರಂಜನ್, ಎಚ್.ಹರೀಶ್ಕುಮಾರ್, ಪಡುವಾರಹಳ್ಳಿ ಎಂ.ರಾಮಕೃಷ್ಣ, ಆರ್.ರವಿಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶ್ ಗೌಡ, ಸಿ.ಎಸ್. ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ. ಹರ್ಷಿತ್ ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.