ಮೈಸೂರು: ಮೈಸೂರು ವಸ್ತುಪ್ರದರ್ಶನ ಮೈದಾನದಲ್ಲಿ ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ದೊರೆತಿದೆ.

ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ದಸರಾದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಿಗಳು ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆಯಲ್ಲಿದ್ದರು.

'ರಾತ್ರಿ ವ್ಯಾಪಾರ ಮುಗಿಸಿ ಬಂದ ಗುಲ್ಬರ್ಗಾ ಮೂಲದ ಸುಮಾರು 10 ರಿಂದ 12 ವರ್ಷ ಬಾಲಕಿ ತಂದೆ- ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದು ಎಲ್ಲರೂ ಎದ್ದಾಗ ಬಾಲಕಿ ಕಾಣೆಯಾಗಿದ್ದಳು, ಹುಡುಕಾಡಿದಾಗ ಟೆಂಟ್ ನಿಂದ 50 ಮೀ ದೂರದಲ್ಲಿರು ಮಣ್ಣಿನ ರಾಶಿ ಬಳಿ ಬಾಲಕಿ ಶವ ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.