ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ 3 ದಿನಗಳಷ್ಟೇ ಬಾಕಿ ಉಳಿದಿದ್ದು, ಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿರುವ ತಂಡಗಳಿಗೆ ಯಾವುದೇ ಮಾಹಿತಿ, ಆಹ್ವಾನ ಪತ್ರ ತಲುಪಿಲ್ಲ.

ನಾಡಿನ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸಲು ವಿವಿಧ ಜಿಲ್ಲೆಗಳಿಂದ 1,500 ಕಲಾವಿದರು ನಗರಕ್ಕೆ ಆಗಮಿಸಲಿದ್ದು, ‘ಕಳೆದ ಬಾರಿ ಎದುರಿಸಿದ್ದ ಕಳಪೆ ಗುಣಮಟ್ಟದ ವಸತಿ ಮತ್ತು ಇತರ ಅವ್ಯವಸ್ಥೆ ಈ ಬಾರಿಯೂ ಮರುಕಳಿಸಬಹುದೇ’ ಎಂಬ ಆತಂಕ ಅವರನ್ನು ಕಾಡುತ್ತಿದೆ.

ಕಳೆದ ವರ್ಷ ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ವಸತಿ ಕಲ್ಪಿಸಲಾಗಿತ್ತು. ಅಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ಸಂಕಷ್ಟ ಅನುಭವಿಸಿದ್ದರು. ಇರುವ 3 ಶೌಚಾಲಯಗಳೂ ಗಬ್ಬುನಾರುತ್ತಿದ್ದವು. ಮಹಿಳೆಯರಿಗೆ ಬಟ್ಟೆ ಬದಲಾವಣೆಗೂ ಪ್ರತ್ಯೇಕ ಸ್ಥಳವಿರಲಿಲ್ಲ.

ಛತ್ರದ ಬಯಲಲ್ಲೇ ನಿಂತು ಮೇಕಪ್ ಮಾಡಿಕೊಳ್ಳಬೇಕಿದ್ದ ಕಲಾವಿದರನ್ನು ಲಾರಿ, ಬಸ್ಗಳಲ್ಲಿ ಅರಮನೆ ಬಳಿ ತಂದು ಬಿಡಲಾಗುತ್ತಿತ್ತು. ಅಲ್ಲಿಯೂ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಮಾಡದೆ ಸಾರ್ವಜನಿಕರೊಂದಿಗೆ ನೂಕಾಟ ಎದುರಿಸಿದ್ದರು. ವಿವಿಧ ಪರಿಕರಗಳು, ವೇಷಭೂಷಣ ಹೊತ್ತು ಒದ್ದಾಡುತ್ತ ಒಳ ಸಾಗಿದ್ದ ತಂಡಗಳಿಗೆ ಯಾವುದೇ ಸೂಕ್ತ ಸೌಲಭ್ಯ ನೀಡದೆ ಒಂದೆಡೆ ಕೂರಿಸಲಾಗಿತ್ತು. ಮಹಿಳೆಯರು, ಮಕ್ಕಳು ಕಷ್ಟ ಎದುರಿಸಿದ್ದರು.

ಪ್ರದರ್ಶನ ಗೊಡವೆ ಬೇಡ: ‘20 ಮಹಿಳೆಯರ ಚಂಡೆ ವಾದ್ಯದ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡಲು ಕಳೆದ ವರ್ಷ ಬಂದಿದ್ದೆವು. ನಂಜರಾಜ ಬಹದ್ದೂರ್ ಛತ್ರದಲ್ಲಿ ಎಲ್ಲ ಕಲಾವಿದರನ್ನು ಸಾಮೂಹಿಕವಾಗಿ ಇರಿಸಿದ್ದರು. ಪುರುಷ ಕಲಾವಿದರನ್ನು ಹೊರ ಹೋಗಲು ಮನವಿ ಮಾಡಿ ಬಟ್ಟೆ ಬದಲಾಯಿಸಬೇಕಿತ್ತು’ ಎಂದು ಉಡುಪಿಯ ಚಂಡೆ ಕಲಾವಿದೆ ಜ್ಯೋತಿ ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿಯೂ ಕಲಾ ಪ್ರದರ್ಶನ ನೀಡಬೇಕು ಎಂದು ಭಾರಿ ಆಸೆಯಿತ್ತು. ಆದರೆ, ಕಳೆದ ವರ್ಷ ಎದುರಿಸಿದ ಅವ್ಯವಸ್ಥೆಯಿಂದ ತಂಡದ ಕಲಾವಿದೆಯರೂ ಮುಂದೆ ಬರುತ್ತಿಲ್ಲ. ಹಾಗಾಗಿ ಅರ್ಜಿ ಸಲ್ಲಿಸಿಲ್ಲ. ಮಹಿಳಾ ಕಲಾವಿದರಿಗೆ ತೀರ ಅಗತ್ಯ ಎನ್ನಿಸುವ ಸೌಲಭ್ಯವೂ ಅಲ್ಲಿ ದೊರೆಯದ ಕಾರಣ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಬೆಳಿಗ್ಗೆ 10 ಗಂಟೆಗೆ ಅರಮನೆಯೊಳಗೆ ಹೋಗುವ ಕಲಾವಿದರು ಮಧ್ಯಾಹ್ನ 2ರ ನಂತರ ಹೊರಡುವ ಮೆರವಣಿಗೆವರೆಗೂ ಶೌಚಾಲಯ ವ್ಯವಸ್ಥೆಯಿಲ್ಲದೆ ಕಾದು ಕುಳಿತಿರಬೇಕು. ಮೆರವಣಿಗೆ ಆರಂಭವಾದ ಬಳಿಕ ರಸ್ತೆಯಲ್ಲಿ ಸುಮಾರು 5 ಕಿ.ಮೀ.ವರೆಗೂ ಬಿಸಿಲಿನಲ್ಲಿಯೇ ಪ್ರದರ್ಶನ ನೀಡುತ್ತಾ ಸಾಗುತ್ತೇವೆ. ಕುಡಿಯಲು ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಬನ್ನಿಮಂಟಪ ತಲುಪಿದ ಮೇಲೆ ನಮ್ಮನ್ನು ವಿಚಾರಿಸುವವರೇ ಇರುವುದಿಲ್ಲ. ಕಳೆದ ವರ್ಷ ರಾತ್ರಿ ಹನ್ನೊಂದಾದರೂ ನಮಗೆ ವಾಪಸ್ ತೆರಳಲು ವ್ಯವಸ್ಥೆ ಮಾಡಿರಲಿಲ್ಲ’ ಎಂದು ಜಾನಪದ ಕಲಾವಿದರೊಬ್ಬರು ದೂರಿದರು.

ವೇದಿಕೆ ಕಲಾವಿದರಿಗೆ ನೀಡುವಂತಹ ಸೌಲಭ್ಯವನ್ನು ದಸರಾ ಮೆರವಣಿಗೆ ಕಲಾವಿದರಿಗೂ ನೀಡಲಿ. ವಸತಿ ಗೌರವಧನಕ್ಕೆ ಆದ್ಯತೆ ನೀಡಿ.
–ಅಶ್ವರಾಮು, ಜಾನಪದ ಕಲಾವಿದ ಬಳ್ಳಾರಿ

ನಮಗೆ ಯಾವುದೇ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಕಲಾವಿದರಿಗೆ ನೀಡಿರುವ ಆಹ್ವಾನ ವಾಸ್ತವ್ಯ ವ್ಯವಸ್ಥೆ ಬಗ್ಗೆಯೂ ಮಾಹಿತಿ ಇಲ್ಲ.
–ಗಣೇಶ್ ಅಧ್ಯಕ್ಷ, ದಸರಾ ಮೆರವಣಿಗೆ ಉಪಸಮಿತಿ

ಇನ್ನೂ ಆಹ್ವಾನ ಬಂದಿಲ್ಲ!

‘ಪ್ರದರ್ಶನಕ್ಕೆ ಅವಕಾಶ ಕೋರಿ ಅರ್ಜಿ ಹಾಕಿದ್ದ ಹಲವು ತಂಡಗಳ ಪರಿಚಯವಿದ್ದು ಯಾರಿಗೂ ಆಹ್ವಾನ ಬಂದಿಲ್ಲ. ತಡವಾಗಿ ಬಂದರೆ ತಯಾರಿ ಕಷ್ಟವಾಗುತ್ತದೆ’ ಎಂದು ಕಂಸಾಳೆ ಕಲಾವಿದ ರೇವಣ್ಣ ಹೇಳಿದರು. ‘ಆಹ್ವಾನ ತಡವಾದರೆ ವಾಹನಗಳನ್ನು ಮಾಡಿಕೊಂಡು ಬರಲು ಸಾಧ್ಯವಾಗುವುದಿಲ್ಲ. ಕಲಾವಿದರನ್ನು ಸಂಘಟಿಸಿ ಸಾಲ ಮಾಡಿ ವಾಹನ ಬಾಡಿಗೆ ನೀಡಿ ಕಾಯ್ದಿರಿಸಬೇಕು. ಕಡೆ ಗಳಿಗೆಯಲ್ಲಿ ಆಹ್ವಾನ ಬಂದರೆ ಬರುವುದು ಅಸಾಧ್ಯ’ ಎಂದು ಉತ್ತರ ಕರ್ನಾಟಕ ಭಾಗದ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ವೀಕ್ಷಕ ವಿವರಣೆಗೆ ಆದ್ಯತೆ ನೀಡಿ’

‘ಅರಮನೆಯಿಂದ ಬನ್ನಿಮಂಟಪದವರೆಗೂ ರಸ್ತೆಯಲ್ಲಿ ನಿಂತ ಜನರಿಗೆ ಮೆರವಣಿಗೆಯಲ್ಲಿನ ಕಲಾತಂಡ ಮತ್ತು ಸ್ತಬ್ಧಚಿತ್ರಗಳ ಬಗ್ಗೆ ಮಾಹಿತಿ ನೀಡಲು ಧ್ವನಿವರ್ಧಕ ಅಳವಡಿಸಬೇಕು. ಇಲ್ಲದಿದ್ದರೆ ದೂರದಿಂದ ದಸರಾ ನೋಡಲು ಬರುವ ಜನರಿಗೆ ಯಾವುದೇ ವಿಶೇಷ ಮಾಹಿತಿ ದೊರೆಯುವುದಿಲ್ಲ. ಕಲೆಗೂ ಉತ್ತೇಜನ ದೊರಕುವುದಿಲ್ಲ’ ಎಂದು ನಗರದ ನಿವಾಸಿ ರಾಮಣ್ಣ ಸುರೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.