ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Mysuru Dasara: ಸಾಂಸ್ಕೃತಿಕ ಹಬ್ಬಕ್ಕೆ ಕ್ರೀಡೆಯ ಮುನ್ನುಡಿ

ಅ.3ರಿಂದ 4 ದಿನಗಳವರೆಗೆ ದಸರಾ ಕ್ರೀಡಾಕೂಟ: ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ
Published : 20 ಸೆಪ್ಟೆಂಬರ್ 2024, 5:06 IST
Last Updated : 20 ಸೆಪ್ಟೆಂಬರ್ 2024, 5:06 IST
ಫಾಲೋ ಮಾಡಿ
Comments
ಅ.3ರಿಂದ 6ರವರೆಗೆ ಈ ಬಾರಿಯ ದಸರಾ ಕ್ರೀಡಾಕೂಟ ನಡೆಯಲಿದೆ. 3500 ಕ್ರೀಡಾಪಟು ಗಳು ಪಾಲ್ಗೊಳ್ಳಲಿದ್ದು ಆತಿಥ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ
ಭಾಸ್ಕರ್ ನಾಯಕ್‌ ಹಿರಿಯ ಸಹಾಯಕ ನಿರ್ದೇಶಕ ಕ್ರೀಡಾ ಇಲಾಖೆ
ಕ್ರೀಡಾಪಟುವಿಲ್ಲದೆ ಉದ್ಘಾಟನೆ!
ಅ.3ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿಯೂ ಕ್ರೀಡಾಪಟುವಿಲ್ಲದೆ ದಸರಾ ಉದ್ಘಾಟನೆ ಆಗುತ್ತಿರುವುದು ಕ್ರೀಡಾ ಪ್ರೇಮಿಗಳಲ್ಲಿ ಬೇಸರ ತರಿಸಿದೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುವಿನ ಕೈಯಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸುವುದು ವಾಡಿಕೆ. ಈ ಹಿಂದೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕುಸ್ತಿಪಟು ಸಾಕ್ಷಿ ಮಲ್ಲಿಕ್‌ರಂತಹ ಖ್ಯಾತನಾಮರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಯುವ ಸ್ಪರ್ಧಿಗಳಲ್ಲಿ ಉತ್ಸಾಹ ತುಂಬಿದ್ದರು. ಆದರೆ ಕಳೆದ ವರ್ಷ ಈ ಸಂಪ್ರದಾಯಕ್ಕೆ ಕ್ರೀಡಾ ಇಲಾಖೆಯು ತಿಲಾಂಜಲಿ ಹಾಡಿತ್ತು. ಕ್ರೀಡಾಪಟು ಬದಲಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು.
ಕಳೆಗಟ್ಟಲಿದೆ ನಾಡಕುಸ್ತಿ
ದಸರಾ ಕ್ರೀಡಾಕೂಟದ ಜೊತೆಗೇ ನಡೆಯುವ ಕುಸ್ತಿ ಕೂಡ ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಆವೆ ಮಣ್ಣಿನಲ್ಲಿ ಈ ಬಾರಿಯೂ ಸೆಣೆಸಾಟಕ್ಕೆ ಕುಸ್ತಿ ಪಟುಗಳು ಸಜ್ಜಾಗುತ್ತಿದ್ದಾರೆ. ಅ.3ರಿಂದ 6ರವರೆಗೆ ಪಾಯಿಂಟ್‌ ಕುಸ್ತಿ ಪಂದ್ಯಗಳು ಹಾಗೂ 9ರವರೆಗೆ ನಾಡಕುಸ್ತಿ ಪಂದ್ಯಗಳು ನಡೆಯಲಿವೆ. ಅದಕ್ಕೆ ಪೂರ್ವಭಾವಿಯಾಗಿ ಸೆ. 22ರಂದು ಕುಸ್ತಿಪಟುಗಳ ಜೋಡಿ ಕಟ್ಟುವ ಪ್ರಕ್ರಿಯೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT