ಕಲಾಸಕ್ತರ ನಿರಂತರ ಪ್ರೋತ್ಸಾಹದಿಂದ ಉತ್ಸವ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿದೆ. ಯುವಜನರು ಈ ಪರಂಪರೆಯನ್ನು ಮುಂದುವರಿಸಬೇಕು
ಸಿ.ಆರ್.ಹಿಮಾಂಶು ಕಾರ್ಯದರ್ಶಿ ಎಸ್‌ಪಿವಿಜಿಎಂಸಿ ಟ್ರಸ್ಟ್
‘ಪ್ರಜಾವಾಣಿ’ ಸಹಯೋಗದಲ್ಲಿ ಕಾರ್ಯಕ್ರಮ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಸಂಗೀತೋತ್ಸವ ನಡೆಯಲಿದೆ. ಗೌರಿ–ಗಣೇಶ ಹಬ್ಬದ ದಿನವಾದ ಆ.27ರಂದು ಗಣೇಶ ಮೂರ್ತಿಗೆ ಪೂಜೆ ನಂತರ ಉತ್ಸವ ಆರಂಭವಾಗಲಿದೆ. 28ರಂದು ಸಂಜೆ 6ಕ್ಕೆ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಉದ್ಯಮಿ ಜಗನ್ನಾಥ ಶೆಣೈ ಅಧ್ಯಕ್ಷತೆ ವಹಿಸುವರು. 31ರಂದು ಬೆಳಿಗ್ಗೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಸೆ.8ರಂದು ಬೆಳಿಗ್ಗೆ 6ಕ್ಕೆ ರಘುಲೀಲಾ ಸಂಗೀತ ಮಂದಿರದಿಂದ ನಗರ ಸಂಕೀರ್ತನೆ 8ಕ್ಕೆ ಚಳ್ಳಕೆರೆ ಸಹೋದರರಿಂದ ನಕ್ಷತ್ರ ಹೋಮ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಪ್ರಸಾದ ವಿನಿಯೋಗ ನಡೆಯಲಿದೆ.