ಮೈಸೂರು: ಜಯಲಕ್ಷ್ಮೀಪುರಂನ ಬಿ.ಎಂ ಹ್ಯಾಬಿಟ್ಯೂಟ್ ಮಾಲ್ನಲ್ಲಿ ಸೋಮವಾರ ಸಂಜೆ ಬ್ಯಾನರ್ ತೆರವುಗೊಳಿಸುವ ವೇಳೆ ಮಾಲ್ನ ಕಟ್ಟಡದಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಟೆಕ್ನಿಷಿಯನ್ ಮೃತಪಟ್ಟಿದ್ದು, ರಕ್ಷಿಸಲು ಹೋದ ಯುವಕನಿಗೆ ಗಂಭೀರ ಗಾಯಗಳಾಗಿವೆ.

ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದ ಸುನೀಲ್ (35) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂನ ನಿವಾಸಿ ಚಂದ್ರು (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಾಲ್ನಲ್ಲಿ ಟೆಕ್ನಿಶಿಯನ್ ಆಗಿದ್ದ ಸುನೀಲ್ ಸಂಜೆ 5 ಗಂಟೆ ಸಮಯದಲ್ಲಿ ಮಾಲ್ನ ಒಳ ಆವರಣದಲ್ಲಿ 60 ಅಡಿ ಎತ್ತರದಲ್ಲಿ ಅಳವಡಿಕೆಯಾಗಿದ್ದ ಬ್ಯಾನರ್ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಪಿಒಪಿ ಬಾರ್ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣವೇ ಬಾರ್ ಕುಸಿದು ಸುನೀಲ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಚಂದ್ರು ಕೂಡ ಸ್ಥಳದಲ್ಲಿಯೇ ಇದ್ದು, ರಕ್ಷಣೆಗೆ ಮುಂದಾಗಿ ಕೆಳಗೆ ಬಿದ್ದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಕಟ್ಟಡದ ಮಾಲೀಕರಾದ ದೀಪಕ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದು, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.