ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆ ಜಂಬೂಸವಾರಿಗೆ ದಿನಗಣನೆ: ಮರದ ಅಂಬಾರಿ ಹೊತ್ತ ‘ಅಭಿಮನ್ಯು’

Last Updated 5 ಸೆಪ್ಟೆಂಬರ್ 2022, 13:29 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರೆ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ಅಂಬಾರಿ ‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಲಾಯಿತು.

ಅರಮನೆ ಆವರಣದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್ ಅವರು 'ಅಭಿಮನ್ಯು' ಜೊತೆ ಕುಮ್ಕಿ ಆನೆಗಳಾದ 'ಚೈತ್ರಾ', 'ಕಾವೇರಿ'ಗೂ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಿದರು.

ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಮರದ ಅಂಬಾರಿ ಹೊತ್ತ 'ಅಭಿಮನ್ಯು' ಆನೆ ಹೆಜ್ಜೆ ಹಾಕಿದನು. ಉಳಿದ ಆನೆಗಳಾದ ಧನಂಜಯ, ಗೋಪಾಲಸ್ವಾಮಿ, ಲಕ್ಷ್ಮಿ, ಮಹೇಂದ್ರ, ಭೀಮ, ಅರ್ಜುನ ಕೂಡ ನಡಿಗೆ ತಾಲೀಮಿನಲ್ಲಿ ಹೆಜ್ಜೆ ಹಾಕಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT