ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುತ್ತೂರು ಜೆಎಸ್ಎಸ್ ವಿದ್ಯಾರ್ಥಿಗಳ ಸಾಧನೆ

ತಾಲ್ಲೂಕು ಮಟ್ಟದ ಪ್ರೌಢಶಾಲೆ ಕ್ರೀಡಾಕೂಟ
Published : 18 ಸೆಪ್ಟೆಂಬರ್ 2024, 14:31 IST
Last Updated : 18 ಸೆಪ್ಟೆಂಬರ್ 2024, 14:31 IST
ಫಾಲೋ ಮಾಡಿ
Comments

ನಂಜನಗೂಡು: ಶಾಲಾ ಶಿಕ್ಷಣ ಇಲಾಖೆ ನಗರದಲ್ಲಿ  ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 22 ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗ: 100 ಮೀ. ಓಟ ಶಿವಪ್ಪ ಪ್ರಥಮ ಸ್ಥಾನ, 1500 ಮೀ ಓಟ ನಾಗರಾಜು – ಪ್ರಥಮ ಸ್ಥಾನ, ಎತ್ತರ ಜಿಗಿತ ಯಶವಂತ್ ಪ್ರಥಮ ಸ್ಥಾನ, 3000 ಮೀ. ಓಟ ಬೋಜಪ್ಪ ಕೋಟಿ - ದ್ವಿತೀಯ ಸ್ಥಾನ, ಚಕ್ರ ಎಸೆತ, ಗುಂಡು ಎಸೆತ ಪವನ್ ಯು.ಡಿ. ದ್ವಿತೀಯ ಸ್ಥಾನ, 400 ಮೀ. ಓಟ ಈರಪ್ಪ – ತೃತೀಯ ಸ್ಥಾನ, 200 ಮೀ. ಓಟ ಸಿದ್ರಾಮಯ್ಯ ದ್ವಿತೀಯ ಸ್ಥಾನ, 4x400 ಮೀ. ರಿಲೇ ಓಟ ನಾಗರಾಜು ಮತ್ತು ತಂಡ ಪ್ರಥಮ ಸ್ಥಾನ, 4x100 ಮೀ. ರಿಲೇ ಅದ್ವೈತ್ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗ: 800 ಮೀ. ಓಟ ರಂಜಿತ - ಪ್ರಥಮ ಸ್ಥಾನ, 1500 ಮೀ ಓಟ ಬಿ.ಡಿ. ಕಸ್ತೂರಿ – ಪ್ರಥಮ ಸ್ಥಾನ, ತಟ್ಟೆ ಎಸೆತ ಇಸ್ನೇಹ ದ್ವಿತೀಯ ಸ್ಥಾನ, ಯಫಬಿ ಗುಂಡು ಎಸೆತ ಮತ್ತು ಭರ್ಜಿ ಎಸೆತ ದ್ವಿತೀಯ ಸ್ಥಾನ, 4x400 ಮೀ. ಓಟ ಕಸ್ತೂರಿ ಮತ್ತು ತಂಡ ಪ್ರಥಮ ಸ್ಥಾನ, 4x100 ಮೀ. ಕೀರ್ತನ ಮತ್ತು ತಂಡ ದ್ವಿತೀಯ ಸ್ಥಾನ, 3000 ಮೀ. ಓಟ ಬೋರಮ್ಮ - ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ವಿಭಾಗದಲ್ಲಿ ಶರತ್ ಪ್ರಸಾದ್ 100ಮೀ ಓಟ ಪ್ರಥಮ, ವಿಜಯ್‍ಕುಮಾರ್ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಮತ್ತು ಎತ್ತರ ಜಿಗಿತದಲ್ಲಿ ಯೋಗಿನಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT