ನಂಜನಗೂಡು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ನೀಡುವುದನ್ನು ತಾಲ್ಲೂಕು ವಾಲ್ಮೀಕಿ ನಾಯಕ ಮಹಾಸಭಾ ವಿರೋಧಿಸುತ್ತದೆ ಎಂದು ಮಹಾಸಭಾದ ಸಂಚಾಲಕ ಹುಲ್ಲಹಳ್ಳಿ ಜೆ.ನಾಗೇಂದ್ರ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ನಡೆಸುತ್ತಿದ್ದಾರೆ. ಹಿಂದೆ ದೇವರಾಜ ಅರಸು ಅವರು ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿ ಹಾವನೂರ್ ಆಯೋಗ ರಚಿಸಿದ್ದರು, ರಾಜ್ಯದಲ್ಲಿ 3ನೇ ಹೆಚ್ಚು ಜನಸಂಖ್ಯೆ ಹೊಂದಿರುವ ನಾಯಕ ಸಮುದಾಯದ ಮೀಸಲಾತಿ ಪ್ರಮಾಣವನ್ನು ಬೆಜೆಪಿ ಸರ್ಕಾರ ಶೇ3ರಿಂದ ಶೇ 7 ಹೆಚ್ಚಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ನಡೆಸುವ ಮೂಲಕ ತಮ್ಮ ಕುರುಬ ಸಮಾಜವನ್ನು ಮುಂಚೂಣಿಗೆ ತರುವ ಮೂಲಕ ನಾಯಕ ಸಮಾಜದ ಮೀಸಲಾತಿಯಲ್ಲಿ ಸಿಂಹ ಪಾಲು ಪಡೆಯಲು ಹುನ್ನಾರ ನಡೆಸಿದ್ದಾರೆ, ನಮ್ಮ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಕುರುಬ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಯತ್ನದ ವಿರುದ್ಧ ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮುಖಂಡ ಸಿ.ಚಂದ್ರು ಮಾತನಾಡಿ, ನಾಯಕ ಸಮಾಜ ಸತತ 30-40 ವರ್ಷಗಳಿಂದ ಹೋರಾಟ ನಡೆಸಿ ಶೇ 7 ರಷ್ಟು ಮೀಸಲಾತಿ ಪಡೆದಿದೆ. ಪ್ರಬಲ ಕುರುವ ಸಮುದಾಯದವರು ಮುಖ್ಯಮಂತ್ರಿ, ಸಚಿವರು, ಕಾರ್ಖಾನೆ ಮಾಲೀಕ, ಗುತ್ತಿಗೆದಾರರಾಗಿದ್ದಾರೆ. ಆರ್ಥಿಕವಾಗಿ ಪ್ರಬಲರಾಗಿದ್ದಾರೆ, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನ್ಯಾಯಸಮ್ಮತವಲ್ಲ, ಸರ್ಕಾರದ ಈ ದೋರಣೆಯನ್ನು ಖಂಡಿಸಿ ನಾಯಕ ಸಮುದಾಯ ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸುತ್ತದೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಹೆಡತಲೆ ಮಹದೇವನಾಯ್ಕ, ಗೋಪಿ, ಪುಟ್ಟರಂಗನಾಯ್ಕ, ಕಸುವಿನ ಹಳ್ಳಿ ಕುಮಾರ್, ಕುಂಬರಳ್ಳಿ ಮಹೇಶ್, ಹುರ ಪ್ರಕಾಶ್, ಶಿವರಾಜು,ತಗಡೂರು ರಾಮು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.