ಹುಣಸೂರು: ಪಹಲ್ಗಾವ್ನಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಉಗ್ರವಾಮಿಗಳ ವಿರುದ್ಧ ಭಾರತ ಕ್ರಮ ತೆಗೆದುಕೊಂಡು ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ನಗರದ ಉಡುಪಿ ರಾಘವೇಂದ್ರ ಮಠಕ್ಕೆ ಗುರುವಾರ ಉಡುಪಿಗೆ ತೆರಳುವ ಮಾರ್ಗ ಮಧ್ಯೆ ಭೇಟಿ ನೀಡಿ ಧಾರ್ಮಿಕ ಪ್ರಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಶ್ಮೀರದ ಪಹಲ್ಗಾವ್ನಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಒಳಗೊಂಡಂತೆ ಭಾರತೀಯ ಹಿಂದೂ ಪ್ರವಾಸಿಗರ ಮೇಲೆ ಭಯೋತ್ಪಾದರು ಗುಂಡಿನ ದಾಳಿ ನಡೆಸಿರುವುದು ಹೇಯ ಕೃತ್ಯ. ಈ ಘಟನೆಯನ್ನು ಭಾರತದ ಪ್ರತಿಯೊಬ್ಬ ಹಿಂದೂ ಸಮುದಾಯದವರು ಖಂಡಿಸಬೇಕಾಗಿದೆ ಎಂದರು.

ಈ ಘಟನೆ ನಂತರ ದೇಶದ ಆಂತರಿಕ ಭದ್ರತೆ ಕುರಿತು ಮತ್ತಷ್ಟು ಪ್ರಶ್ನಿಸುವ ವಾತಾವರಣ ಸೃಷ್ಟಿಯಾಗಿದ್ದು, ವಿಶ್ವದಾದ್ಯಂತ ಈ ಘಟನೆಯನ್ನು ಪ್ರಜ್ಞಾವಂತರು ಗಮನಿಸಿದ್ದಾರೆ. ಒಂದೆಡೆ ಕಾಶ್ಮೀರ ಮತ್ತೊಂದು ಭಾಗದಲ್ಲಿ ಪಶ್ಚಿಮ ಭಾಗದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮಿತಿ ಮೀರಿದ್ದು, ಕೇಂದ್ರ ಸರ್ಕಾರ ತಕ್ಷಣವೆ ಕಠಿಣ ನಿಲುವು ತೆಗೆದುಕೊಂಡು ಕಾರ್ಯಾಚರಣೆ ನಡೆಸಿ ತಕ್ಕ ಉತ್ತರ ನೀಡಬೇಕಿದೆ ಎಂದರು.

ದೇಶದ ಜನರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಈ ಘಟನೆಯನ್ನು ಗೃಹ ಸಚಿವಾಲಯ ಎಚ್ಚರಿಕೆ ಗಂಟೆಯಂದು ಪರಿಗಣಿಸಿ ಮುಂದಾಗಬಹುದಾದ ಅನಾಹುತ ನಿಗ್ರಹಿಸಲು ಸೂಕ್ತ ರಕ್ಷಣಾ ಕೆಲಸಕ್ಕೆ ಸಜ್ಜಾಗಬೇಕು. ಮೋದಿ ಸರ್ಕಾರಕ್ಕೆ ಎಸೆದಿರುವ ಸವಾಲಿಗೆ ತಕ್ಕ ಉತ್ತರ ನೀಡಿ ದೇಶದ ನಾಗರಿಕರ ವಿಶ್ವಾಸ ಗಳಿಸಬೇಕಾದ ಸಂದರ್ಭ ಎದುರಾಗಿದೆ ಎಂದರು.

ಅಭದ್ರತೆ ವಾತಾವರಣ ಸೃಷ್ಟಿಸಲು ಭಯೋತ್ಪಾದಕರು ನಡೆಸಿರುವ ಕೃತ್ಯ ದೇಶವನ್ನು ವ್ಯಾಪಿಸದಂತೆ ಮತ್ತಷ್ಟು ಭದ್ರತಾ ವ್ಯವಸ್ಥೆ ಗಟ್ಟಿಗೊಳಿಸಿ ಉಗ್ರರಿಗೆ ತಕ್ಕ ಪಾಠಕಲಿಸಿ
ವಿಶ್ವಪ್ರಸನ್ನ ಸ್ವಾಮೀಜಿ ಪೇಜಾವರ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.