ಮೈಸೂರು: ‘ಕೌಟಿಲ್ಯನ ಅರ್ಥಶಾಸ್ತ್ರದ ಇಂಗ್ಲಿಷ್ ಅವತರಣಿಕೆಯು ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಆದರೆ ಸಂಸ್ಕೃತದ ಅವತರಣಿಕೆ ಎಲ್ಲಿಯೂ ಸಿಗಲಿಲ್ಲ. ಇಲ್ಲಿ ರಿಯಾಯಿತಿ ದರದಲ್ಲಿ ಆ ಪುಸ್ತಕ ಖರೀದಿಸಿದೆ...’

ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಬುಧವಾರ ಬಂದಿದ್ದ ದೆಹಲಿಯ ಸಂಶೋಧಕಿಯೊಬ್ಬರ ಸಂತಸದ ನುಡಿಗಳಿವು. ಆಕೆ ತಮ್ಮ ಸ್ನೇಹಿತ ಡಾ.ಬಿ.ಗೋಪಾಲ್ಸಿಂಗ್ ಅವರೊಂದಿಗೆ ಪ್ರಸಾರಾಂಗದ ‘ಪುಸ್ತಕೋತ್ಸವ’ ದಲ್ಲಿ ಪುಸ್ತಕ ಖರೀದಿಸಲು ಬಂದಿದ್ದರು.

ಇಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೇಳ ನಡೆಯುತ್ತಿದ್ದು, ಪ್ರತಿನಿತ್ಯ ಇಂಥ ವಿಭಿನ್ನ ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದೆ.

ಪ್ರಸಾರಾಂಗವು ಸುಮಾರು 2,700ರಷ್ಟು ಶೀರ್ಷಿಕೆಯ ಕೃತಿಗಳನ್ನು ಪ್ರಕಟಿಸಿದೆ. ಗೋದಾಮಿನಲ್ಲಿ ₹9 ಕೋಟಿ ಮೌಲ್ಯದ 12 ಲಕ್ಷ ಪ್ರತಿಗಳನ್ನು ಸಂರಕ್ಷಿಸಲಾಗಿದೆ. ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಗಾಂಧಿ ಭವನ, ಬಸವ ಅಧ್ಯಯನ ಪೀಠ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬಾಬು ಜಗಜೀವನ್ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಕಟಣೆಗಳೂ ಇಲ್ಲಿವೆ.

ಪ್ರಸಾರಾಂಗದ ಪ್ರಕಟಣೆ ಕೊಠಡಿಯಲ್ಲಿ, ಮೈಸೂರು ವಿಶ್ವವಿದ್ಯಾಲಯಕ್ಕೆ ನೂರು ವರ್ಷ ತುಂಬಿದಾಗ ಬಿಡುಗಡೆಗೊಂಡ ‘ಶತಮಾನದ ಪಥ’ ಕೃತಿ ಗಮನ ಸೆಳೆಯುತ್ತದೆ. ‘ಇದರ ಒಂದು ಪ್ರತಿ ಮುದ್ರಣಕ್ಕೆ ₹ 12 ಸಾವಿರ ಖರ್ಚಾಗಿದ್ದು, ₹ 4 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ₹ 2,250ಕ್ಕೆ ದೊರಕುತ್ತಿದೆ’ ಎಂದು ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ.ಬಿ.ಎಸ್.ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವಕೋಶ ಸರಣಿಯ ಮುಖಬೆಲೆ ₹ 11 ಸಾವಿರ. ಈಗ ₹ 5 ಸಾವಿರಕ್ಕೆ ದೊರೆಯುತ್ತದೆ. ಐಎಎಸ್, ಕೆಎಎಸ್ಗೆ ಬೇಕಾದ ಮೂಲ ವಿಷಯಗಳಿರುವುದರಿಂದ ಬಡ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ’ ಎಂದರು.

1968ರ ಆಸುಪಾಸಿನಲ್ಲಿ ಮುದ್ರಣಗೊಂಡ ಕುವೆಂಪು ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಂಪಾದಕತ್ವದ ‘ಕರ್ನಾಟ ಭಾರತ ಕಥಾಮಂಜರಿ’ಯು ಅಂದು ₹ 3ಕ್ಕೆ ಮಾರಾಟವಾಗುತ್ತಿತ್ತು. 1986ರಲ್ಲಿ 2ನೇ ಆವೃತ್ತಿ ಮುದ್ರಣವಾದಾಗ ₹ 7ಕ್ಕೆ ಮಾರಾಟವಾಗಿತ್ತು. ಇದು ಮರು ಮುದ್ರಣವಾಗುತ್ತಿದೆ.

ಸಂಸ್ಥೆಯ ಭೋಜನಾಲಯದ ಕಟ್ಟಡದಲ್ಲಿ ಶೇ 70 ರಿಯಾಯಿತಿಯ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದೆ. 1962– 68ರಲ್ಲಿ ಮುದ್ರಣಗೊಂಡ ಪುಸ್ತಕಗಳಿವೆ. ವಿಶ್ವವಿದ್ಯಾಲಯದ ಹಿಂದಿನ ಪಠ್ಯ ಪುಸ್ತಕಗಳ ಸಂಗ್ರಹಗಳಿವೆ.

ಡಿ. 15 ಹಾಗೂ 16ರಂದು ಪುಸ್ತಕೋತ್ಸವದ ಪ್ರಯುಕ್ತ ಉಪನ್ಯಾಸ–ಸಂವಾದಗಳು ನಡೆಯಲಿವೆ. ಪ್ರಸಾರಾಂಗದಲ್ಲಿ ದೀರ್ಘ ಸೇವೆ ಸಲ್ಲಿಸಿದವರಿಗೆ ಗೌರವ ಸಮರ್ಪಣೆಯೂ ನಡೆಯಲಿದೆ.

ಆನ್ಲೈನ್ ಖರೀದಿಗೆ ಬೇಡಿಕೆ

ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಪ್ರಸಾರಾಂಗವು ಡಿಜಿಟಲ್ ಸ್ಪರ್ಷ ನೀಡಿದ್ದು ಆನ್ಲೈನ್ನಲ್ಲೂ ಖರೀದಿಸಬಹುದು. ಸಂಸ್ಥೆಯ ಮೊ.ಸಂ 9008890807 ಅಥವಾ 9902400588 ಸಂಪರ್ಕಿಸಿದರೆ ಪುಸ್ತಕದ ಮಾಹಿತಿಯನ್ನು ವಾಟ್ಸ್ಆ್ಯಪ್ನಲ್ಲಿ ಕಳಿಸಲಾಗುತ್ತದೆ. ಅಂಚೆ ವೆಚ್ಚವನ್ನು ಗ್ರಾಹಕರೇ ಭರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.