63ನೇ ಪಾರಂಪರಿಕ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸೂರ್ಯಗಾಯತ್ರಿ ಗಾಯನ ಲಹರಿ
ಯುವ ದಸರಾದಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್
ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ಸಂಗೀತ ಸಂಯೋಜಕ ಇಳಯರಾಜ
ಮೈಸೂರಿಗನಿಗೆ ದೊಡ್ಡ ಪ್ರಶಸ್ತಿಯ ಗರಿ
ಮೇ 25: ಮೈಸೂರಿನ ಡಾ.ಚಿದಾನಂದ ಎಸ್. ನಾಯ್ಕ್ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕನ್ನಡ ಕಿರುಚಿತ್ರ ಕಾನ್ ಚಿತ್ರೋತ್ಸವದ ಗರಿ ಸಿಕ್ಕಿತು. ‘ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ಹಳೆಯ ವಿದ್ಯಾರ್ಥಿಯ ಚಿತ್ರಕ್ಕೆ ‘ಲಾ ಸಿನೆಫ್’ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತು.
ಮೈಸೂರಿನಲ್ಲಿ ನಡೆದ ರ್ನಾಟಕ ಶಾಸ್ತ್ರೀಯ ಸಂಗೀತದ ದಾಸ ಪರಂಪರೆಯ ಸಂಗೀತೋತ್ಸವ ‘ಮೈಸೂರು ಸಂಗೀತ ಸುಗಂಧ– 2024’ಕ್ಕೆ ಚಾಲನೆ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಬಹುರೂಪಿ ಜನಪದೋತ್ಸವದಲ್ಲಿ ‘ಕಂಗೀಲು’ ನೃತ್ಯ
ಪಾರಂಪರಿಕ ಸಂಗೀತೋತ್ಸವ
ಸೆ.7: ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್‌ಪಿವಿಜಿಎಂಸಿ) ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ 63ನೇ ‘ಪಾರಂಪರಿಕ ಸಂಗೀತೋತ್ಸವ’ ಸೆ.7ರಿಂದ ಸೆ.18ರವರೆಗೆ ನಡೆಯಿತು. ವಿದ್ವಾನ್ ಟಿ.ಎಂ.ಕೃಷ್ಣ ತಿರುವಾಯೂರು ಗಿರೀಶ್ ವಿಘ್ನೇಶ್ ಈಶ್ವರ್ ಕುನ್ನಕ್ಕುಡಿ ಬಾಲಮುರಳೀಕೃಷ್ಣ ಸೂರ್ಯಗಾಯತ್ರಿ ವಿದ್ವಾನ್ ಹರೀಶ್ ಶಿವರಾಮಕೃಷ್ಣನ್ ಕಲ್ಯಾಣಪುರಂ ಎಸ್.ಅರವಿಂದ್ ಸ್ಫೂರ್ತಿರಾವ್ ಶ್ರುತಿಸಾಗರ್ ಚಾರುಮತಿ ರಘುರಾಮನ್ ಅಕ್ಕರೈ ಸಹೋದರಿಯರಾದ ಶುಭಲಕ್ಷ್ಮಿ– ಸ್ವರ್ಣಲತಾ ಸಂಗೀತ ಕಛೇರಿ ನೀಡಿದರು.