ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು | ರಸ್ತೆ ಅಪಘಾತ: ಗೃಹಿಣಿ ಸಾವು

Published 22 ಮಾರ್ಚ್ 2024, 14:29 IST
Last Updated 22 ಮಾರ್ಚ್ 2024, 14:29 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಚಿನ್ನದಗುಡಿ ಹುಂಡಿ ಗ್ರಾಮದ ಸಮೀಪ ಶುಕ್ರವಾರ ಟ್ರಕ್‌– ಮೊಪೆಡ್‌ಗೆ ಡಿಕ್ಕಿ ಹೊಡೆದಿದ್ದು, ಕವಲಂದೆ ಹೋಬಳಿಯ ಮಲ್ಲೂಪುರ ಗ್ರಾಮದ ಪಾಪಣ್ಣ ನಾಯಕರ ಪತ್ನಿ ಮಂಗಳಮ್ಮ(35) ಮೃತಪಟ್ಟರು.

ಪಾಪಣ್ಣನಾಯಕ ಹಾಗೂ ಮಕ್ಕಳಾದ ತೇಜಸ್, ಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂಜನಗೂಡಿನ ದೊಡ್ಡ ಜಾತ್ರೆಗೆ ಭಾಗವಹಿಸುವ ಸಲುವಾಗಿ ಮಲ್ಲೂಪುರ ಗ್ರಾಮದಿಂದ ಟಿವಿಎಸ್ ಮೊಪೆಡ್‍ನಲ್ಲಿ ಪಾಪಣ್ಣನಾಯಕ ಮತ್ತು ಮಂಗಳಮ್ಮ ತಮ್ಮ ಮಗ ತೇಜಸ್‍ನ ಹಾಗೂ ಮಗಳು ಲಕ್ಷ್ಮಿ ಜೊತೆಗೂಡಿ ಬರುತ್ತಿದ್ದರು. ಚಿನ್ನದಗುಡಿ ಹುಂಡಿ ಬಳಿ ಮಿಲಿಟರಿ ಟ್ರಕ್ ಹಿಂಬದಿಯಿಂದ ಗುದ್ದಿದೆ.

‘ಪಾಪಣ್ಣ ನಾಯಕ, ಇಬ್ಬರು ಮಕ್ಕಳು ರಸ್ತೆಯ ಎಡಭಾಗಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳಮ್ಮ ರಸ್ತೆಯ ಬಲಭಾಗಕ್ಕೆ ಬಿದ್ದಿದ್ದು, ಲಾರಿಯ ಹಿಂಬದಿ ಚಕ್ರ ಅವರ ಹೊಟ್ಟೆ ಮೇಲೆ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಎಎಸೈ ಶಿವಣ್ಣ ಭೇಟಿ ನೀಡಿ ಮಹಜರು ನಡೆಸಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT