ಬಿಳಿಕೆರೆ ಗ್ರಾಮದಲ್ಲಿ ವಿವಿಧ ರಸ್ತೆಯಲ್ಲಿ ಅಳವಡಿಸಿರುವ ಸೋಲಾರ್ ಮಿನಿ ಹೈ ಮಾಸ್ಕ್ ಬೀದಿ ದೀಪ.
ಸಿ.ಅನಿಲ್ ಎಇಇ ಸೆಸ್ಕ್ ಬಿಳಿಕೆರೆ ವಿಭಾಗ
ಪುಷ್ಪಲತಾ ಬಿಳಿಕೆರೆ ನಿವಾಸಿ ಯೋಜನೆ ಫಲಾನುಭವಿ
ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸಾರ್ವಜನಿಕರು ಮನೆ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಬಳಸಿ ಸ್ವಾವಲಂಬಿಯಾಗಿರುವ ಚಿತ್ರ.

ಕೇಂದ್ರ ಸರ್ಕಾರದ ಈ ಯೋಜನೆ ಸಾರ್ವಜನಿಕರು ವಿದ್ಯುತ್ ಸ್ವಾವಲಂಬಿಯಾಗಲು ಪೂರಕವಾಗಿದ್ದು ಸರ್ಕಾರ ಸಬ್ಸಿಡಿ ನೀಡುತ್ತಿದೆ. ಸ್ಥಳೀಯ ಆಡಳಿತದ ಸಹಕಾರದಿಂದ ಬಿಳಿಕೆರೆ ನಿವಾಸಿಗಳು ಇದರ ಪ್ರಯೋಜನ ಪಡೆಯಬಹುದು
ಸಿ.ಅನಿಲ್ ಸೆಸ್ಕ್ ಎಇಇ ಬಿಳಿಕೆರೆ
ಪಿಎಂ ಸೂರ್ಯಘರ್ ಯೋಜನೆಯಲ್ಲಿ 3 ಕಿಲೋ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಪ್ಯಾನೆಲ್ ಅಳವಡಿಸಿಕೊಂಡಿದ್ದು ಮನೆ ಬಳಕೆಗೆ ತಿಂಗಳಿಗೆ 150 ಯುನಿಟ್ ಬಳಸಿ ಉಳಿದ ವಿದ್ಯುತ್ ಸೆಸ್ಕ್ ಗೆ ಮಾರಾಟ ಮಾಡುತ್ತಿದ್ದೇನೆ.
ಪುಷ್ಪಲತಾ ಫಲಾನುಭವಿ ಬಿಳಿಕೆರೆ ‘ಜನ ಜಾಗೃತಿ’
ಬಿಳಿಕೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮಾತನಾಡಿ ‘ಯೋಜನೆ ಕುರಿತು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಮನೆಗಳ ಪಟ್ಟಿ ಸಿದ್ಧಪಡಿಸುತ್ತಿದ್ದು ಸೌರ ಪ್ಯಾನೆಲ್ ಮತ್ತು ಲಾಭದ ಕುರಿತು ಅರಿವು ಮೂಡಿಸಿದ್ದೇವೆ. ಯೋಜನೆ ಫಲಾನುಭವಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ₹ 2 ರಿಂದ ₹ 2.50 ಲಕ್ಷದವರೆಗೆ ಸಾಲ ಸಿಗಲಿದೆ ಎಂದು ಮಾಹಿತಿ ನೀಡಿದರು.