ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ರಕ್ಷಣಾ ಪಿಂಚಣಿದಾರರಿಗೆ ಸ್ಪರ್ಶ್‌ ಪೋರ್ಟಲ್‌

Published : 26 ಸೆಪ್ಟೆಂಬರ್ 2024, 4:05 IST
Last Updated : 26 ಸೆಪ್ಟೆಂಬರ್ 2024, 4:05 IST
ಫಾಲೋ ಮಾಡಿ
Comments

ಮೈಸೂರು: ‘ರಕ್ಷಣಾ ವಿಭಾಗದ ಪಿಂಚಣಿದಾರರಿಗೆ ಡಿಜಿಟಲ್ ಇಂಡಿಯಾದ ಅಂಗವಾಗಿ ಸ್ಪರ್ಶ್ ಪೋರ್ಟಲ್‌ ವಿಸ್ತರಿಸಲಾಗುತ್ತಿದೆ’ ಎಂದು ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕ ರಾಮಬಾಬು ತಿಳಿಸಿದರು.

ಬೆಂಗಳೂರಿನ ರಕ್ಷಣ ಖಾತೆಗಳ ಪ್ರಧಾನ ನಿಯಂತ್ರಕರ ಕಚೇರಿಯು ಬುಧವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಪಿಂಚಣಿದಾರರ ಸಭೆ ಉದ್ಘಾಟಿಸಿ ಮಾತನಾಡಿದರು.

‘ರಕ್ಷಣಾ ವಿಭಾಗದ ಸಿಬ್ಬಂದಿಯ ತ್ಯಾಗ– ಬಲಿದಾನ, ಕರ್ತವ್ಯ ನಿಷ್ಠೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ನಿವೃತ್ತಿಯಾದ ನೌಕರರು– ಸಿಬ್ಬಂದಿ ಜೀವನವು ಸುಗಮವಾಗಿ ಸಾಗಲು ಇಲಾಖೆ ಯೋಜನೆ ರೂ‍ಪಿಸಿದೆ. ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು’ ಎಂದರು.

‘ಪಿಂಚಣಿದಾರರ ಅನುಕೂಲ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಲು ಡಿಜಿಟಲೀಕರಣ ಮಾಡಲಾಗಿದೆ. ರಕ್ಷಣಾ ವಿಭಾಗದಲ್ಲಿ 31 ಲಕ್ಷ ಪಿಂಚಣಿದಾರರಿದ್ದಾರೆ’ ಎಂದರು.

‘ಈ ಪೋರ್ಟಲ್‌ನಲ್ಲಿ ಫಲಾನುಭವಿಗಳು ನೇರವಾಗಿ ಅರ್ಜಿಯನ್ನು ಸಲ್ಲಿಸಿ ದಾಖಲೆಗಳನ್ನೂ ಸಲ್ಲಿಸಬಹುದು. ಅರ್ಜಿಯ ಸ್ಥಿತಿಗತಿ ಬಗ್ಗೆ ನೋಡಬಹುದು. ಅಂತಿಮವಾಗಿ ದಾಖಲೆಗಳು ಸಮರ್ಪಕವಾಗಿದ್ದು, ಪಿಂಚಣಿಗೆ ಅರ್ಹತೆ ಪಡೆದರೆ ಹಣ ನೇರವಾಗಿ ಫಲಾನುಭವಿ ನೀಡಿರುವ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಬಂದು ತಲುಪುತ್ತದೆ’ ಎಂದು ಮಾಹಿತಿ ನೀಡಿದರು.

‘50 ಸಾವಿರ ಪಿಂಚಣಿದಾರರು ಸ್ಪರ್ಶ್‌ ಪೋರ್ಟಲ್‌ ಮೂಲಕ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಪುಸ್ತಕಗಳಲ್ಲಿ ದಾಖಲೆ ಮಾಡಿಕೊಳ್ಳುವ ವ್ಯವಸ್ಥೆಯಲ್ಲಿ ಇರುವ ಪಿಂಚಣಿದಾರರ ದಾಖಲೆಗಳನ್ನು ಡಿಜಿಟಲ್‌ಗೆ ಪರಿವರ್ತಿಸುವ ಕಾರ್ಯವೂ ನಡೆಯುತ್ತಿದೆ’ ಎಂದು ತಿಳಿಸಿದರು.

‘ಅಹವಾಲು ಸ್ವೀಕಾರದಲ್ಲಿ ಬರುವ ಸಲಹೆ– ಸೂಚನೆಗಳನ್ನು ಪ್ರಯಾಗ್ ರಾಜ್‌ನಲ್ಲಿರುವ ಮುಖ್ಯ ಕಚೇರಿಗೆ ಕಳುಹಿಸುತ್ತೇವೆ. ಪಿಂಚಣಿದಾರರು, ನಿವೃತ್ತ ನೌಕರರು ನೀಡುವ ಸಲಹೆಗಳಿಂದ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಬಹುದು’ ಎಂದು ಹೇಳಿದರು.

ಡಿಎಫ್‌ಆರ್‌ಎಲ್ ವಿಜ್ಞಾನಿ ಆರ್.ಕುಮಾರ್, ಕರ್ನಲ್ ಅವಿನ್ ಉತ್ತಯ್ಯ, ಜೆಸಿಡಿಎ ಕೆ.ಸುಬೇರ ರಾಮ್ ಜಯಂತ್ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT