ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಪಕ್ಷದ ಅಭ್ಯರ್ಥಿ ಬೆಂಬಲಿಸಿ: ಅಶ್ವಿನ್‌ ಕುಮಾರ್‌ ಮನವಿ

Published 13 ಏಪ್ರಿಲ್ 2024, 14:15 IST
Last Updated 13 ಏಪ್ರಿಲ್ 2024, 14:15 IST
ಅಕ್ಷರ ಗಾತ್ರ

ತಲಕಾಡು: ಇಲ್ಲಿನ ಮುಖ್ಯ ರಸ್ತೆಯಲ್ಲಿ ಕಾರ್ಯಕರ್ತರ ಜೊತೆ ಜೆಡಿಎಸ್ ಪಕ್ಷದ ಮಾಜಿ ಶಾಸಕ ಅಶ್ವಿನ್ ಕುಮಾರ್ ಕಾರ್ಯಕರ್ತರನ್ನ ಶನಿವಾರ ಭೇಟಿ ಮಾಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಬಾಲರಾಜ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ತಲಕಾಡು ಹೋಬಳಿಯ ಕಾರ್ಯಕರ್ತರು ಮತ ಚಲಾಯಿಸುವ ಮೂಲಕ ದೇಶಕ್ಕೆ ಪ್ರಧಾನಿ ಮೋದಿ, ನಮ್ಮ ರಾಜ್ಯ ಕರ್ನಾಟಕ ಕ್ಕೆ ಕುಮಾರಣ್ಣನ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರು ಭಾನುವಾರ ಮೈಸೂರಿಗೆ ಆಗಮಿಸಲಿದ್ದಾರೆ. 17ರಂದು ಬನ್ನೂರು ಪಟ್ಟಣಕ್ಕೆ ಕುಮಾರಸ್ವಾಮಿ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಹೆಚ್ಚು ಕಾರ್ಯಕರ್ತರು ಆಗಮಿಸಿ ಜೆಡಿಎಸ್ ಪಕ್ಷದ ಶಕ್ತಿಯನ್ನು ತೋರಿಸಬೇಕು. ಮುಂದಿನ ವಾರದಿಂದ ಸಕ್ರಿಯವಾಗಿ ಮೈತ್ರಿ ಅಭ್ಯರ್ಥಿ ಬಾಲರಾಜು ಪರ ಮಡವಾಡಿ ಗ್ರಾಮದಿಂದ ಪ್ರಚಾರ ಸಭೆಯನ್ನು ಆರಂಭಿಸಿ ಮೈತ್ರಿಯ ಅಭ್ಯರ್ಥಿಯ ಗೆಲುವಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮತ ಕೇಳುತ್ತೇನೆ’ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕುಕ್ಕುರ್ ಉಮಾಪತಿ, ಕುರುಬಳನ ಹುಂಡಿ ರುದ್ರೇಶ್, ಕಾಡಿ ಮಾದೇವ್, ಕಾಳ ಬಸವನಹುಂಡಿ ಕುಮಾರ್, ಪ್ರಭು, ಭರತ್ ಗೌಡ,ರಾಜೇಶ್,ಅರಸಯ್ಯ ಚಾಮನಾಯ್ಕ, ಲೋಕೇಶ್, ಪುರುಷೋತ್ತಮ್, ಅರುಂಧತಿ ನಗರದ ಶಂಕರ್, ರವಿಕುಮಾರ್, ಹಳೆ ಬೀದಿ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT