ಮೈಸೂರು: ಇಲ್ಲಿನ ವಿಶ್ವೇಶ್ವರ ನಗರದ ಅಪಾರ್ಟ್ಮೆಂಟ್ನ ನಿವಾಸಿಗಳಾದ ಚೇತನ್ (45), ಅವರ ಪತ್ನಿ ರೂಪಾಲಿ (43), ತಾಯಿ ಪ್ರಿಯಂವಧ (62) ಹಾಗೂ ಮಗ ಕುಶಾಲ್ (15) ಮೃತದೇಹಗಳು ಅವರ ಫ್ಲ್ಯಾಟ್ನಲ್ಲಿ ಸೋಮವಾರ ಕಂಡುಬಂದಿವೆ.

ಹಾಸನ ಜಿಲ್ಲೆಯ ಗೊರೂರು ಮೂಲದ ಚೇತನ್ ವಿದೇಶದಲ್ಲಿ ಉದ್ಯೋಗಿಯಾಗಿದ್ದರು. 2019 ರಲ್ಲಿ ಮೈಸೂರಿಗೆ ಬಂದು, ಪತ್ನಿ ಹೆಸರಿನಲ್ಲಿ ಕಂಪೆನಿ ತೆರೆದು, ಸೌದಿಗೆ ಕಾರ್ಮಿಕರನ್ನು ಕಳುಹಿಸುವ ಕೆಲಸವನ್ನು ಆನ್ಲೈನ್ ಮೂಲಕ ನಿರ್ವಹಿಸುತ್ತಿದ್ದರು. ಅದೇ ವರ್ಷ ಎರಡು ಫ್ಲ್ಯಾಟ್ ಖರೀದಿಸಿ, ಒಂದರಲ್ಲಿ ತಾವು ಪತ್ನಿ ಹಾಗೂ ಮಗನೊಂದಿಗೆ ವಾಸವಿದ್ದು, ಪಕ್ಕದ ಫ್ಲ್ಯಾಟ್ನಲ್ಲಿ ತಾಯಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.

‘ವಿದೇಶದಲ್ಲಿರುವ ಸಹೋದರ ಭರತ್ ಅವರಿಗೆ ಚೇತನ್ ಅವರು ನಾಲ್ವರು ಸತ್ತು ಹೋಗುವುದಾಗಿ ವಾಟ್ಸ್ಯಾಪ್ ಮೂಲಕ ತಿಳಿಸಿದ್ದರು. ಭರತ್ ಸೋಮವಾರ ಮುಂಜಾನೆ ರೂಪಾಲಿ ಪೋಷಕರಿಗೆ ಕರೆ ಮಾಡಿ ಅಪಾರ್ಟ್ಮೆಂಟ್ಗೆ ತೆರಳುವಂತೆ ಸೂಚಿಸಿದ್ದರು. ಅವರು ಬಂದಾಗ ಚೇತನ್ ಮೃತದೇಹ ಫ್ಯಾನ್ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿತ್ತು. ಪತ್ನಿ, ಮಗ ಮಲಗಿದ ಸ್ಥಿತಿಯಲ್ಲಿದ್ದರು. ಇನ್ನೊಂದು ಫ್ಲ್ಯಾಟ್ನಲ್ಲಿದ್ದ ತಾಯಿಯೂ ಮೃತಪಟ್ಟಿದ್ದರು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

‘ಭಾನುವಾರ ಸಂಜೆ ಗೊರೂರಿನ ದೇವಾಲಯಕ್ಕೆ ಚೇತನ್ ಕುಟುಂಬವು ಭೇಟಿ ನೀಡಿದ್ದು, ಕುವೆಂಪು ನಗರದಲ್ಲಿರುವ ಮಾವನ ಮನೆಯಲ್ಲಿ ರಾತ್ರಿ ಊಟ ಮಾಡಿ ಫ್ಲ್ಯಾಟ್ಗೆ ಬಂದಿದ್ದರು. ಸಾವಿಗೆ ಕಾರಣ ತಿಳಿದಿಲ್ಲ. ಎಫ್ಎಸ್ಎಲ್, ಸೋಕೊ (ಸೀನ್ಸ್ ಆಫ್ ಕ್ರೈಂ ಆಫೀಸರ್ಸ್) ತಂಡವನ್ನು ಬಳಸಿ ತನಿಖೆ ಮುಂದುವರೆಸಿದ್ದೇವೆ’ ಎಂದರು.

‘ಚೇತನ್ ಕೊಠಡಿಯಲ್ಲಿ ಡೆತ್ ನೋಟ್ ಹಾಗೂ ವಾಯ್ಸ್ ನೋಟ್ ದೊರೆತಿದ್ದು, ಸಾವಿಗೆ ಯಾರೂ ಕಾರಣರಲ್ಲ, ನನಗೆ ಸಾಲದ ಸಮಸ್ಯೆಯಿದೆ. ನಾನು ಮೂವರನ್ನೂ ಕರೆದೊಯ್ಯುತ್ತಿದ್ದೇನೆ ಎಂದು ಬರೆಯಲಾಗಿದೆ. ಗೊರೂರು ಫ್ಯಾಮಿಲಿ ಎಂಬ ವಾಟ್ಸ್ಆ್ಯಪ್ ಗ್ರೂಪ್ಗೂ ಇದೇ ರೀತಿಯ ಸಂದೇಶ ಕಳಿಸಿದ್ದರು’ ಎಂದು ಮೂಲಗಳು ತಿಳಿಸಿವೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.