ಸಿಂಧನೂರು (ರಾಯಚೂರು ಜಿಲ್ಲೆ): ಸಿಂಧನೂರು ದಸರಾ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಐದು ಜನ ಕಲಾವಿದರು ಕಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಾಗಲಕೋಟೆಯ ಗುರುನಾಥ್ ಕಟ್ಟಿ (ಸೃಜನಶೀಲ ಕಲಾಕೃತಿ), ಹಾವೇರಿಯ ಅಶ್ವಿನಿ ಎಂ.ಎಚ್. (ಸೃಜನಶೀಲ ಕಲಾಕೃತಿ), ರಾಯಚೂರಿನ ರವಿ ನಾಯಕ (ರೇಖಾಚಿತ್ರ–ರಥೋತ್ಸವ), ಯಾದಗಿರಿಯ ಎಸ್.ಎಸ್. ಗಬಸಾವಳಗಿ (ಮಹಾಕೂಟ ಭೂ ದೃಶ್ಯ–ಜಲವರ್ಣ), ಮೈಸೂರಿನ ಕೀರ್ತಿ ಆರ್. (ಸಾಂಪ್ರದಾಯಿಕ) ಆಯ್ಕೆಯಾಗಿದ್ದಾರೆ.

ದಸರಾ ಉತ್ಸವ ಸಮಿತಿಯ ಪ್ರಶಸ್ತಿಗೆ ಆಯ್ಕೆಯಾದ 5 ಅತ್ಯುತ್ತಮ ಕಲಾ ಕೃತಿಗಳಿಗೆ ತಲಾ ₹10,000 ನಗದು ಬಹುಮಾನ ಮತ್ತು ದಸರಾ ಪ್ರಶಸ್ತಿಯನ್ನು ಗುರುವಾರ (ಅ.10) ನೀಡಲಾಗುವುದು ಎಂದು ಕಲಾ ದಸರಾ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಹುಡಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.