ರಾಯಚೂರು: ‘ರೈತರು ಕೃಷಿ ಸಂಸ್ಕರಣಾ ಘಟಕಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಕೃಷಿ ಉತ್ಪನ್ನಗಳಿಗೆ ಅಧಿಕ ಬೆಲೆ ದೊರೆಯಲಿದೆ. ರೈತರಿಗೆ ಮಾರುಕಟ್ಟೆ ಮತ್ತು ಸಂಪರ್ಕ ಸರಳವಾಗಲಿದೆ’ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆ, ರೈತರ ತರಬೇತಿ ಕೇಂದ್ರ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಿನ್ನದ ಗಣಿಯ ಊರು ರಾಯಚೂರಿಗೆ ನನ್ನ ಪ್ರಮಾಣಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲೂ ಇಂತಹ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಖಾಸಗಿ ಸಹಭಾಗಿತ್ವ ಹಾಗೂ ರೈತರನ್ನು ಬಳಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಬೀದರ್ನಲ್ಲಿ ಸೋಯಾ ಚಿಕ್ಸ್, ಸೋಯಾ ಎಣ್ಣೆ, ಕಲಬುರಗಿ ಜಿಲ್ಲೆಯಲ್ಲಿ ಜೋಳದ ಪಾಪ್ಕಾರ್ನ್, ಯಾದಗಿರಿ ಜಿಲ್ಲೆಯಲ್ಲಿ ಶೇಂಗಾ ಎಣ್ಣೆ, ಬಳ್ಳಾರಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಪೌಡರ್, ಕೊಪ್ಪಳ ಜಿಲ್ಲೆಯಲ್ಲಿ ಮಾವಿನ ಹಾಗೂ ಪಪ್ಪಾಯಿ ಸಂಸ್ಕರಣಾ ಘಟಕ, ವಿಜಯನಗರ ಜಿಲ್ಲೆಯಲ್ಲಿ ಕಡಲೆಕಾಯಿ ಚಿಕ್ಕಿ, ಹುಣಸೆ ತಿರಳು, ರಾಯಚೂರು ಜಿಲ್ಲೆಯಲ್ಲಿ ತೊಗರಿ, ಕಡಲೆ ಬೆಳೆಗಳ ಸಂಸ್ಕರಣಾ ಘಟಕ ಆರಂಭಿಸಲಾಗಿದೆ‘ ಎಂದು ಹೇಳಿದರು.

‘ಸಂಸ್ಕರಣಾ ಘಟಕಗಳಿಂದಲೇ ಇಲ್ಲಿಯ ಉತ್ಪನ್ನಗಳು ರಾಜ್ಯದ ಎಲ್ಲ ಕಡೆಗೂ ಹೋಗಲಿದೆ. ಇದರಿಂದ ಕೃಷಿ ಉತ್ಪಾದಕರ ಸಹಭಾಗಿತ್ವ ಹೆಚ್ಚಾಗಲಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಬೆಂಗಳೂರಿನ ಅಭಿವೃದ್ಧಿಯಾಗುತ್ತಿದೆ. ರಾಯಚೂರು ಅಭಿವೃದ್ಧಿ ಹೊಂದಲು ಕೆಲವಷ್ಟು ಅಡತಡೆಗಳಿವೆ. ಹೀಗಾಗಿ ರಾಯಚೂರು ಅಭಿವೃದ್ಧಿಗೆ ಬೆಳಕು ಚೆಲ್ಲಲಾಗಿದೆ’ ಎಂದು ತಿಳಿಸಿದರು.

‘2023ರಲ್ಲಿ ನೀತಿ ಆಯೋಗದ ಮಾನದಂಡಗಳ ಪ್ರಕಾರ ಪರಿಶೀಲಿಸಲಾಗಿ ದೇಶದಲ್ಲಿ 112 ಜಿಲ್ಲೆಗಳಿಗೆ ಮುಂದವರಿಯಲು ಸಾಧ್ಯವಾಗುತ್ತಿದಲ್ಲ. ಕರ್ನಾಟಕದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿವೆ. ಅದಕ್ಕಾಗಿ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನಾಗಿ ಗುರುತಿಸಲಾಗಿದೆ. ಈ ಜಿಲ್ಲೆಗಳಿಗೆ ಅವಕಾಶಗಳ ಬಾಗಿಲು ತೆರೆಯಲಾಗಿದೆ‘ ಎಂದು ಹೇಳಿದರು.

ಮಹತ್ವಾಕಾಂಕ್ಷೆ 112 ಜಿಲ್ಲೆಗಳ ಪೈಕಿ ವಿಶೇಷವಾಗಿ ರೂಪಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆ ಇದೀಗ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮಸ್ಕಿ ತಾಲ್ಲೂಕು ಮಹತ್ವಾಕಾಂಕ್ಷೆ ಬ್ಲಾಕ್ ಕಾರ್ಯಕ್ರಮಗಳ ಅನುಷ್ಠಾನದಲ್ಲಿ 8ನೇ ಸ್ಥಾನದಲ್ಲಿದೆ‘ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಭತ್ತ ಚೆನ್ನಾಗಿ ಬೆಳೆಯುತ್ತಿದೆ. ಇದರ ಜೊತೆಗೆ ದ್ವಿದಳ ಧಾನ್ಯಗಳನ್ನೂ ಬೆಳೆಯಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಜವಳಗೇರಾದಲ್ಲಿ ಸಂಸ್ಕರಣಾ ಘಟಕ ಹಾಗೂ ರೈತ ತರಬೇತಿ ಕೇಂದ್ರ ತೆರೆಯಲಾಗಿದೆ. ರಾಯಚೂರಲ್ಲಿ ತುಂಗಭದ್ರ ಹಾಗೂ ಕೃಷ್ಣೆಯ ಕೃಪೆ ಇದೆ. ಮಹಾರಾಜರ ಕಾಲದಿಂದಲೂ ಕೃಷಿ ಫಲವತ್ತಾದ ಭೂಮಿಗೆ ಯುದ್ಧಗಳು ನಡೆದಿವೆ. ದ್ವಿದಳ ಬೆಳೆ ಪೈಕಿ 18 ಸಾವಿರ ಮೆಟ್ರಿಕ್ ತೊಗರಿ ಹಾಗೂ 10 ಸಾವಿರ ಮೆಟ್ರಿಕ್ ಟನ್ ಕಡಲೆ ಉತ್ಪಾದನೆಯಾಗುತ್ತಿದೆ. ಇಷ್ಟು ಬೆಳೆದರೂ ಲಾಭ ವ್ಯಾಪಾರಿಗಳ ಕೈ ಸೇರುತ್ತಿದೆ. ಒಳ್ಳೆಯ ಆದಾಯ ಕೈಗೆ ಸಿಗುತ್ತಿಲ್ಲ. ಸಂಸ್ಕರಣಾ ಮಾಡಿದರೆ ಒಳ್ಳೆಯ ಬೆಲೆ ಸಿಗಲಿದೆ’ ಎಂದು ತಿಳಿಸಿದರು.

ನಬಾರ್ಡ್ ಚೇರಮನ್ ಷಾಜಿ ಕೆ.ವಿ ಮಾತನಾಡಿ, ‘ರೈತ ಚಟುವಟಿಕೆಯಲ್ಲಿ ಸಕ್ರಿಯಗೊಳಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ‘ ಎಂದು ಹೇಳಿದರು.

ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಹಾಗೂ ಹಣಕಾಸು ವಿಭಾಗದ ಕಾರ್ಯದರ್ಶಿ ಎಂ.ನಾಗರಾಜ ಮಾತನಾಡಿದರು.

ಜವಳಗೇರಾ ಗ್ರಾ.ಪಂ ಅಧ್ಯಕ್ಷ ನಾಗಲಿಂಗ ಯಮನೂರಪ್ಪ, ಕೆಂದ್ರ ಸಚಿವರ ವಿಶೇಷ ಕಾರ್ಯದರ್ಶಿ ಅನಿರುದ್ಧ, ಜಿಲ್ಲಾಧಿಕಾರಿ ನಿತೀಶ, ಜಿ.ಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ರೈತ ಉತ್ಪಾದಕ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಾಡಗೌಡ ಉಪಸ್ಥಿತರಿದ್ದರು.

ಮುಖಂಡರಾದ ವೆಂಕಟರಾವ ನಾಡಗೌಡ, ಕೆ.ವಿರೂಪಾಕ್ಷಪ್ಪ, ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಶಂಕರ ಪ್ರಕಾಶ ಹಾಗೂ ತಂಡದವರು ನಿರೂಪಿಸಿದರು.

‘700 ಮೆಟ್ರಿಕ್ ಟನ್ ತೊಗರಿ ಸಂಸ್ಕರಣೆ ಸಾಧ್ಯ’

‘ಜವಳಗೇರಾದಲ್ಲಿನ ಹೊಸ ಘಟಕದಲ್ಲಿ ಒಂದು ತಾಸಿಗೆ 350 ಕೆ.ಜಿ ತೊಗರಿ ಸಂಸ್ಕರಣೆ ಮಾಡಬಹುದು. ಒಂದು ವರ್ಷಕ್ಕೆ 250 ದಿನ ಒಂದು ಶಿಫ್ಟ್ನಲ್ಲಿ ಕೆಲಸ ಮಾಡಿದರೆ 700 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಬಹುದಾಗಿದೆ’ ಎಂದು ವಿವರಿಸಿದರು. ‘ರಾಯಚೂರು ಜಿಲ್ಲೆಯಲ್ಲಿ 80 ಸಾವಿರ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯಾಗುತ್ತದೆ. ಈ ಎರಡು ಶಿಫ್ಟ್ನಲ್ಲಿ ಕೆಲಸ ಮಾಡಿದರೆ 250 ದಿನಗಳಲ್ಲಿ 2 ಸಾವಿರ ಮೆಟ್ರಿಕ್ ಟನ್ ತೊಗರಿ ಕಡಲೆ ಸಂಸ್ಕರಣೆ ಮಾಡಬಹುದು. ಜಿಲ್ಲೆಯಲ್ಲಿ 40 ಘಟಕಗಳನ್ನು ಸ್ಥಾಪಸಿದರೆ 80 ಸಾವಿರ ಮೆಟ್ರಿಕ್ ಟನ್ ಬಳಸಲು ಸಾಧ್ಯವಾಗಲಿದೆ‘ ಎಂದು ತಿಳಿಸಿದರು. ‘ರಾಯಚೂರು ಜಿಲ್ಲೆಯಲ್ಲಿ 20 ಘಟಕ ಆರಂಭಿಸಿ ಅರ್ಧ ತೊಗರಿ ಬಳಿಸಿ ಉಳಿದಿದ್ದನ್ನು ಮಾರುಕಟ್ಟೆಗೆ ಹೋಗಲು ಬಿಡಬೇಕು. ಇದರಿಂದ ಕೃಷಿಗೆ ಒಳ್ಳೆಯ ಬೆಲೆ ಕೊಡಲು ಸಾಧ್ಯವಾಗಲಿದೆ’ ಎಂದರು. ‘ದೋಸೆ ಮಾಡಲು ಕಡಲೆ ಬಳಸಬಹುದು. ಈ ವರ್ಷ 10 ಘಟಕ ಹಾಗೂ ಬರುವ ವರ್ಷ 20 ಘಟಕ ಆರಂಭಿಸಿದರೆ ರಾಯಚೂರು ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ’ ಎಂದು ಹೇಳಿದರು. ‘ರಾಯಚೂರು ತ್ರಿವೇಣಿ ಸಂಗಮದಂತಹ ಸ್ಥಾನದಲ್ಲಿದೆ. ಪಕ್ಕದ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲೂ ವ್ಯಾಪಾರ ವಹಿವಾಟು ವಿಸ್ತರಿಸಲು ಸಾಧ್ಯವಾಗಲಿದೆ. ಇದರಿಂದ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ. ಒಳ್ಳೆಯ ಉತ್ಪನ್ನ ಹಾಗೂ ತರಬೇತಿಯಿಂದ ಸಾಮರ್ಥ್ಯ ವೃದ್ಧಿಯಾಗಲಿದೆ. ಇದು ಸರ್ಕಾರದ ಕೇಂದ್ರವಲ್ಲ ನಿಮ್ಮೆಲ್ಲರ ಕೇಂದ್ರವಾಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೂರು ವರ್ಷಕ್ಕೊಮ್ಮೆ ಬರ’

‘ಹವಾಮಾನ ಇಲಾಖೆ 50 ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ಪ್ರತಿ 3 ವರ್ಷಗಳಿಗೊಮ್ಮೆ ರಾಯಚೂರಿಗೆ ಬರ ಬರುತ್ತದೆ. ಉತ್ತಮ ಬೆಳೆ ಬೆಳೆದರೂ ಬೆಲೆ ಸಿಗುವುದಿಲ್ಲ. ರೈತರನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಾಗಿದೆ’ ಎಂದು ಹೇಳಿದರು. ‘ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುತ್ತಲೇ ಇದೆ. ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲಾಗುತ್ತಿದೆ. ರಿಸ್ಕ್ ಮ್ಯಾನೇಜ್ಮೆಂಟ್ಗೆ ಒತ್ತು ಕೊಟ್ಟು ಕೆಸಿಸಿ ಕಾರ್ಡ್ ಮೂಲಕ ನೆರವು ಕಲ್ಪಿಸಲಾಗುತ್ತಿದೆ‘ ಎಂದು ಹೇಳಿದರು. ‘ತೊಗರಿ ಬೆಲೆ ಎಂಎಸ್ಪಿ 2013–2014ರಲ್ಲಿ ₹4300 ಇತ್ತು. ಈಗ 2025ರಲ್ಲಿ ₹8 ಸಾವಿರ ಆಗಿದೆ. ಹೆಸರಿಗೆ ಎಂಎಸ್ಪಿ ₹4500 ರಿಂದ ₹8500 ಆಗಿದೆ. ಭತ್ತ ₹2069ಗೆ ಏರಿಕೆಯಾಗಿದೆ. ಇದು ಪ್ರಧಾನಿ ಮೋದಿಯಿಂದ ಸಾಧ್ಯವಾಗಿದೆ’ ಎಂದು ತಿಳಿಸಿದರು. ‘ದೇಶದ 24.7ಕೋಟಿ ಮಣ್ಣು ಆರೋಗ್ಯ ಕಾರ್ಡ್ ರೈತರಿಗೆ ತಲುಪಿಸಲಾಗಿದೆ. 8 ಸಾವಿರ ಮಣ್ಣು ಪರೀಕ್ಷೆ ಕೇಂದ್ರ ಆರಂಭಿಸಲಾಗಿದೆ. ₹1700 ಕೋಟಿ ಕೇಂದ್ರದಿಂದ ರಾಜ್ಯಕ್ಕೆ ಕೊಡಲಾಗಿದೆ. ಕೇಂದ್ರ ಪಿಎಂ ಕೃಷಿ ಸಿಂಚಾಯಿ ಯೋಜನೆಯಿಂದ ಕರ್ನಾಟಕಕ್ಕೆ ₹93 ಕೋಟಿ ಕೊಡಲಾಗಿದೆ. ₹ 3.69 ಲಕ್ಷ ಕೋಟಿ ದೇಶದ ರೈತರಿಗೆ ಸೌಲಭ್ಯ ವಿತರಿಸಲಾಗಿದೆ. ಆತ್ಮನಿರ್ಭರದ ಅಡಿಯಲ್ಲಿ ದ್ವಿದಳ ಕೃಷಿಗೆ ₹ 11444 ಕೋಟಿ ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.