ಲಿಂಗಸುಗೂರು: ಇಲ್ಲಿನ ಕೃಷಿ ಡಿಡಿ ಕಚೇರಿ ಸಿಂಧನೂರಿಗೆ ಸ್ಥಳಾಂತರಿಸುವ ಕ್ರಮದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್ ಅವರು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಸಿಂಧನೂರಿಗೆ ಸ್ಥಳಾಂತರದ ಕುರಿತು ಶಾಸಕ ವಜ್ಜಲ್ ಸದನದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಗಮನ ಸೆಳೆದರು. ‘ಸಿಂಧನೂರಿಗೆ ಕೃಷಿ ಡಿಡಿ ಕಚೇರಿ ಸ್ಥಳಾಂತರಕ್ಕೆ ಪ್ರಸ್ತಾವನೆ ಬಂದಿದೆ.ಇದಕ್ಕೆ ವಿರೋಧ ವ್ಯಕ್ತಪಡಿಸಿ ಆದೇಶ ರದ್ದುಗೊಳಿಸುವಂತೆ ರೈತ ಸಂಘದ ಪದಾಧಿಕಾರಿಗಳು ಖುದ್ದಾಗಿ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ ಈ ಕುರಿತು ಸಮಗ್ರ ವರದಿ ತರಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗುವೆ’ ಎಂದು ಕೃಷಿ ಸಚಿವರು ಉತ್ತರಿಸಿದರು.

ನಮ್ಮ ತಾಲ್ಲೂಕಿನ ಕಚೇರಿ ತೆಗೆದುಕೊಂಡು ಹೋದಂತೆ ಸಿಂಧನೂರು ಶಾಸಕರ ಅಧ್ಯಕ್ಷತೆಯ ವಿಸಿಬಿ ಶಿಕ್ಷಣ ಸಂಸ್ಥೆಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿಕೊಳ್ಳಲಿ
ಮಾನಪ್ಪ ವಜ್ಜಲ್, ಶಾಸಕ ಲಿಂಗಸುಗೂರು

ಶಾಸಕ ವಜ್ಜಲ್, ಸುಲಲಿತವಾಗಿ ನಡೆಯುತ್ತಿದ್ದ ಕೃಷಿ ಡಿಡಿ ಕಚೇರಿಯನ್ನು ಸಿಂಧನೂರಿನ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ. ಅಧಿಕಾರಿಗಳಿಂದ ತಪ್ಪು ವರದಿ ಸಿದ್ಧಪಡಿಸಿ ಕಚೇರಿ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಚಿವರನ್ನೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಾಲ್ಲೂಕಿಗೆ ಮಂಜೂರಾಗಿದ್ದ 200 ಹಾಸಿಗೆ ಸಾಮರ್ಥ್ಯದ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿದ್ದೀರಿ. ಈಗ ಕೃಷಿ ಡಿಡಿ ಕಚೇರಿ ಮೇಲೆ ಕಣ್ಣು ಹಾಕಿದ್ದು ಉದ್ದೇಶ ಪೂರ್ವಕ. ಲಿಂಗಸುಗೂರು ತಾಲ್ಲೂಕುನ್ನು ಟಾರ್ಗೆಟ್ ಮಾಡುವುದನ್ನು ಕೈಬಿಡಬೇಕು. ಕಚೇರಿ ಸ್ಥಳಾಂತರ ವಿರೋಧಿಸಿ ನಾನಾ ಸಂಘಟನೆಗಳ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಸರ್ಕಾರ ಕೂಡಲೇ ಇದಕ್ಕೆ ಸ್ಪಂದಿಸಬೇಕು. 2024ರಲ್ಲಿ ಹೊರಡಿಸಲಾದ ಕೃಷಿ ಡಿಡಿ ಕಚೇರಿ ಸ್ಥಳಾಂತರ ಆದೇಶ ಕೂಡಲೇ ರದ್ದುಗೊಳಿಸಬೇಕು ಇಲ್ಲಿಯೇ ಕಚೇರಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.