ರಾಯಚೂರು: ಜಿಲ್ಲೆಯು ಸರ್ವ ರಂಗದಲ್ಲಿಯೂ ಅತ್ಯಂತ ಹಿಂದುಳಿದಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಸೌಲಭ್ಯಗಳು ಅತ್ಯಂತ ಕೆಳಮಟ್ಟದಲ್ಲಿವೆ. ಅದಕ್ಕಾಗಿಯೇ ಅಂತರರಾಷ್ಟ್ರೀಯ ಮಟ್ಟದ ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಇನ್ಫೆಂಟ್ ಜೀಸಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾದರ್ ಪೌಲರಾಜ್ ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಏಮ್ಸ್ ಹೋರಾಟ ಸಮಿತಿಯು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 125ನೇ ದಿನಕ್ಕೆ ಕಾಲಿರಿಸಿದ್ದು, ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಪ್ರದೇಶವು ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕೂಡಲೇ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಧರ್ಮಗುರುಗಳಾದ ರೇ. ಸಂಪತಕುಮಾರ್ ರೇ. ವರಪ್ರಸಾದ್ ರೇ. ಅನ್ನೋ ಕ್ರಾಶ್ ರೆ. ಜಾನ್ ವೆಸ್ಲಿ ರೇ. ಡೆವಿಡ್ ರೇ. ಸಿ.ಪ್ರಭಾಕರ್, ರೇ .ಎಂ.ಅನೇಕ ರೇ ಜಾಶ್ವ ಗಡ್ಡಂ , ರೇ..ವಿಲ್ಸನ್ ,ರೇ ಮಾರ್ಟಿನ್ ,ರೇ ಸುಂದರರಾಜ್, ರೇ. ಲೂಕ್ ,ರೇ. ರಾಜೇಶ್, ರೇ. ವಿಲ್ಸನ್ ರವಿ , ರೇ. ಡಿ. ಜೇಮ್ಸ್' ರೇ. ವಿ.ಡೇನಿಯಲ್ ರೇ. ಜಾಶವರಾಜ್, ರೇ.ಮ್ಯಾಥ್ಯೂ ,ರೇ. ಜೇ.ರಾಜ್ ರೇ. ದೇವದಾಸ್ ರೈ .ನವೀನ್ ಕುಮಾರ್ ಮತ್ತಿತರರು ಇದ್ದರು.

ರಾಯಚೂರು ಜಿಲ್ಲಾಡಳಿತದ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಕಾಲೇಜಿನ ಪ್ರಾಂಶುಪಾಲ ಥಾಮಸ್ ಬಾಬುರಾಯ ಶೇಗುಣಿಸಿ ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

ಹೋರಾಟ ಸಮಿತಿಯ ಡಾ. ಬಸವರಾಜ ಕಳಸ, ಅಶೋಕ ಕುಮಾರ್ ಜೈನ್, ಬಶೀರ್ ಅಹ್ಮದ್ ಹೊಸಮನಿ, ಕಾಮರಾಜ ಪಾಟೀಲ, ಜಾನ್ ವೆಸ್ಲಿ, ಗುರುರಾಜ ಕುಲಕರ್ಣಿ, ಬಸವರಾಜ ಮಿಮಿಕ್ರಿ ವೀರೇಶ್ ಬಾಬು ವೀರಭದ್ರಯ್ಯಸ್ವಾಮಿ, ಮಹೇಂದ್ರ ಸಿಂಗ್, ಶ್ಯಾಮ್, ಎಸ್. ಎಸ್.ಬಿರಾದಾರ, ರುದ್ರಯ್ಯ ಗುಣಾರಿ, ತಾಯಣ್ಣ ಯರಗೇರಾ, ಆರ್.ಬಸವರಾಜ ಬಿ.ಬಸವರಾಜ, ಸಂಗಪ್ಪ ಕಡಿ, ಪರಶುರಾಮ್, ಶ್ರೀನಿವಾಸ್ ಕೊಪ್ಪಾರ್, ಶ್ರೀನಿವಾಸ ಕಲವಲದೊಡ್ಡಿ, ಹನುಮಂತ ಸೆಂಟ್ರಿಂಗ್, ಶರಣಪ್ಪ ಅಸ್ಕಿಹಾಳ ನಾಸೀರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.