ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಯುವತಿ ಮೇಲೆ ಹಲ್ಲೆ ನಡೆಸಿ ಬ್ಯಾಗ್‌ ಲೂಟಿ

Published 22 ಡಿಸೆಂಬರ್ 2023, 6:31 IST
Last Updated 22 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ಮಸ್ಕಿ: ಮದುವೆ ಸಮಾರಂಭಕ್ಕೆ ಬಂದಿದ್ದ ಯುವತಿ ಮೇಲೆ ಹಲ್ಲೆ ನಡೆಸಿ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಹೋದ ಘಟನೆ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ನಡೆದಿದೆ.

ಭ್ರಮರಾಂಬ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಮದುವೆಗೆ ಆಗಮಿಸಿದ್ದ ರಾಯಚೂರಿನ ಕುಟುಂಬಸ್ಥರು ಸಮೀಪದ ಯಾತ್ರಿ ನಿವಾಸದಲ್ಲಿ ತಂಗಿದ್ದರು. ಬೆಳಗಿನ ಉಪಾಹಾರಕ್ಕೆಂದು ದೇವಸ್ಥಾನದ ಭೋಜನಾಲಯಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

17 ವರ್ಷದ ಯುವತಿ ತನ್ನ ಬ್ಯಾಗ್ ತೆಗೆದುಕೊಂಡು ಹೋಗಲು ಕೊಠಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಒಳನುಗ್ಗಿದ ಯುವಕನೊಬ್ಬ ಯುವತಿ ಮೇಲೆ ಮೇಲೆ ಹಲ್ಲೆ ನಡೆಸಿ, ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡಿದ್ದಾನೆ. ಕೊರಳಲ್ಲಿನ ಚೈನ್ ಕಸಿದುಕೊಳ್ಳುವ ಯತ್ನ ನಡೆಸಿದಾಗ ಯುವತಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಪಕ್ಕದ ಕೋಠಡಿಯಲ್ಲಿದ್ದ ಆಕೆಯ ಉಳಿದ ಸ್ನೇಹಿತೆಯರು ನೆರವಿಗೆ ಧಾವಿಸಿದ್ದಾರೆ.

ಗಲಾಟೆ ಶಬ್ಧ ಕೇಳಿ ಸಪ್ಲಾಯರ್ಸ್ ಹಾಗೂ ಸೌಂಡ್ ಸಿಸ್ಟಮ್ ಕೆಲಸ ಮಾಡುವ ಹುಡುಗರು ಕೊಠಡಿಗೆ ಬರುವಷ್ಟರಲ್ಲಿ ಯುವಕ ದೇವಸ್ಥಾನದ ಕಂಪೌಂಡ್ ಜಿಗಿದು ಪರಾರಿಯಾಗಿದ್ದಾನೆ. ಸಪ್ಲಾಯರ್ಸ್ ಹಾಗೂ ಸೌಂಡ್ ಸಿಸ್ಟಮ್ ನಲ್ಲಿ ಕೆಲಸ ಮಾಡುವ ಹತ್ತಕ್ಕೂ ಯುವಕರು ಕಳ್ಳನ ಬೆನ್ನಟ್ಟಿದ್ದರು ಸಹ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

ಮೂರು ತಿಂಗಳ ಅವಧಿಯಲ್ಲಿ ಯಾತ್ರಿ ನಿವಾಸದಲ್ಲಿ ತಂಗಿದವರ ಮೊಬೈಲ್ ಕಳ್ಳತನ ಮಾಡಿದ ಪ್ರಕರಣಗಳು ಹೆಚ್ಚಾಗಿವೆ. ಗುರುವಾರ ಬೆಲೆ ಬಾಳುವ ಎರಡು ಐಪೋನ್ ಕಳ್ಳತನ ಮಾಡಲಾಗಿದೆ. ಯುವತಿಯ ಸಂಬಂಧಿಕರು ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಸ್ಥಳಕ್ಕೆ ಬಂದ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT