ರಾಯಚೂರು: ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.

2012 ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದು, ಈ ಮೊದಲು ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಳೆದ ಜನವರಿಯಿಂದ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಮಹಾರಾಷ್ಟ್ರದವರು.

ಮೂರು ತಿಂಗಳೊಳಗೆ ವರ್ಗಾವಣೆ: ರಾಯಚೂರು ಜಿಲ್ಲೆಗೆ ಕಳೆದ ಜುಲೈ 23 ರಂದು ಮೊದಲಬಾರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಡಾ.ಸತೀಶ್ ಬಿ.ಸಿ. ಅವರನ್ನು ಎರಡು ತಿಂಗಳು 17 ದಿನಗಳಲ್ಲಿ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೆ ನಿಖರ ಕಾರಣ ಗೊತ್ತಾಗಿಲ್ಲ. ಜಿಲ್ಲೆಗೆ ಬರುತ್ತಿದ್ದಂತೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಿದ್ದ ಅವರು, ಶೇ 38 ರಷ್ಟಿದ್ದ ಲಸಿಕಾಕರಣ ಶೇ 60 ಕ್ಕೆ ಏರಿಕೆ ಆಗುವುದಕ್ಕೆ ಶ್ರಮಿಸಿದ್ದರು. ಜಿಲ್ಲೆಯಾದ್ಯಂತ ಸಂಚರಿಸಿ ಕಾರ್ಯನಿರ್ವಹಿಸುತ್ತಿದ್ದ ಅವರು ಸರಳತೆ ಹಾಗೂ ಜನರೊಂದಿಗೆ ಒಡನಾಟದಿಂದ ಗಮನ ಸೆಳೆದಿದ್ದರು.

ರಾಜ್ಯ ಸರ್ಕಾರವು ದಿಢೀರ್ ಅವರನ್ನು ಕೊಡಗು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.