ಸಿಂಧನೂರು: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಕಸ ಗುಡಿಸುವ ಮಹಿಳಾ ಕಾರ್ಮಿಕರಿಗೆ ಆರು ತಿಂಗಳಿನಿಂದ ಹೊರ ಗುತ್ತಿಗೆದಾರರು ವೇತನವನ್ನೇ ಕೊಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜೇಶ ಎನ್ನುವ ಪರವಾನಿಗೆದಾರರು ರಾಯಚೂರು ವಿಭಾಗೀಯ ಕಚೇರಿಯಿಂದ ವಿಭಾಗಕ್ಕೆ ಒಳಪಡುವ ಎಲ್ಲ ಬಸ್ ನಿಲ್ದಾಣಗಳ ಕಸ ಗುಡಿಸುವ ಗುತ್ತಿಗೆ ಕೆಲಸದ ಪರವಾನಿಗೆ ಪಡೆದಿದ್ದಾರೆ. ಅವರು ಸಿಂಧನೂರು ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ವೇತನ ಕೊಡದೆ ಅನ್ಯಾಯ ಮಾಡಿದ್ದಾರೆ ಎಂಬುದು ನೊಂದ ಮಹಿಳೆಯರ ಆರೋಪ.

‘ಬಸ್ ನಿಲ್ದಾಣ ನಿರ್ಮಾಣಗೊಂಡು ಉದ್ಘಾಟನೆಯಾದಾಗಿನಿಂದ ನಾವು ಕಾರ್ಯಾನಿರ್ವಹಿಸುತ್ತಿದ್ದೇವೆ. ಹಿಂದಿನ ಎಲ್ಲ ಗುತ್ತಿಗೆದಾರರು ಪ್ರತಿ ತಿಂಗಳ ತಲಾ ₹14 ಸಾವಿರ ವೇತನ ಕೊಡುತ್ತಿದ್ದರು. ಜತೆಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯ ಒದಗಿಸಿದ್ದರು. ಆದರೆ ರಾಜೇಶ ಹೊರಗುತ್ತಿಗೆ ಪಡೆದ ನಂತರ ಆರು ತಿಂಗಳಿನಿಂದ ತಮಗೆ ವೇತನ ಕೊಡದೆ ಸತಾಯಿಸುತ್ತಿದ್ದಾರೆ’ ಎಂದು ಕಸಗುಡಿಸುವ ಮಹಿಳಾ ಕಾರ್ಮಿಕರಾದ ಈರಮ್ಮ ದ್ಯಾಸನೂರು, ಜಯಲಕ್ಷ್ಮಿ, ರೇಣುಕಮ್ಮ ಸುಕಾಲಪೇಟೆ, ಮಹಾಕಾಂಳೆಮ್ಮ, ಲಕ್ಷ್ಮಿ, ಮಹಾದೇವಿ ಮತ್ತಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಸ್ ನಿಲ್ದಾಣದಲ್ಲಿ ಕಸಗುಡಿಸುತ್ತೇವೆ. ಕೆಲವರು ಮಲವಿಸರ್ಜನೆ, ವಾಂತಿ ಮಾಡಿಕೊಂಡಿರುತ್ತಾರೆ. ಇಂತಹ ಯಾವುದೇ ಹೇಸಿಕೆ ಇದ್ದರೂ ಮಡಿವಂತಿಕೆ ಮಾಡಿಕೊಳ್ಳದೆ ತೆಗೆದು ಹಾಕುತ್ತೇವೆ. ಒಂದು ದಿನವೂ ಗೈರು ಹಾಜರಾಗದೆ ಕೆಲಸ ಮಾಡುತ್ತೇವೆ. ಮನೆಯಲ್ಲಿ ನಮ್ಮ ತಾಯಿ ಸತ್ತಿದ್ದರೂ ಅಂತ್ಯಕ್ರಿಯೆಗೆ ಹೋಗದೆ ಕೆಲಸ ಮಾಡಿದ್ದೇನೆ’ ಎಂದು ಹೇಳುತ್ತಾ ಕಾರ್ಮಿಕ ಮಹಿಳೆ ಜಯಲಕ್ಷ್ಮಿ ಕಣ್ಣೀರಾದಳು.

ಈ ಕುರಿತು ಸಿಂಧನೂರು ಡಿಪೋ ವ್ಯವಸ್ಥಾಪಕ ಹೊನ್ನಪ್ಪ ಅವರನ್ನು ಸಂಪರ್ಕಿಸಿದಾಗ ‘ಈ ವಿಷಯ ನಮಗೆ ಸಂಬಂಧ ಪಡುವುದಿಲ್ಲ. ಮಹಿಳೆಯರು ಮಾತ್ರ ಪ್ರತಿನಿತ್ಯ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೆ. ಕಾರ್ಮಿಕರು ಮತ್ತು ಪರವಾನಿಗೆದಾರರ ನಡುವೆ ಏನೋ ವಿವಾದ ಉಂಟಾಗಿದ್ದು, ಕಾರ್ಮಿಕ ನಿರೀಕ್ಷಕರು ಈ ಸಮಸ್ಯೆ ಬಗೆ ಹರಿಸಿರಬಹುದು ಎಂದು ಭಾವಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಮಾಸಿಕ ವೇತನ ನೀಡದೆ ವಂಚನೆ; ಆರೋಪ ನಮ್ಮ ತಾಯಿ ಮೃತಪಟ್ಟರೂ ಕೆಲಸ ಮಾಡದ್ದೇನೆ: ಜಯಲಕ್ಷ್ಮಿ ಗುತ್ತಿಗೆದಾರರಿಂದ ಕಿರುಕುಳ; ಕ್ರಮಕ್ಕೆ ಒತ್ತಾಯ

ಸಿಂಧನೂರು ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯದ ಪರವಾನಿಗೆ ಪಡೆದ ರಾಜೇಶ ಅವರಿಗೆ ನೋಟಿಸ್ ನೀಡಿ ಕಾರ್ಮಿಕರಿಗೆ ವೇತನ ನೀಡಿದ ಬಗ್ಗೆ ದಾಖಲೆ ನೀಡುವಂತೆ ಕೇಳಲಾಗಿತ್ತು. ಪ್ರತಿಕ್ರಿಯೆ ಬಾರದ ಕಾರಣಕ್ಕಾಗಿ ಪೇಮೆಂಟ್ ಆಫ್ ವೇಜೆಸ್ ಆ್ಯಕ್ಟ್ ಅಡಿಯಲ್ಲಿ ಕಲಬುರಗಿ ಕಾರ್ಮಿಕ ಇಲಾಖೆಯ ಉಪ ಆಯುಕ್ತರ ಬಳಿ ಪ್ರಕರಣ ದಾಖಲಿಸಲಾಗಿದೆ ವಿಜಯಲಕ್ಷ್ಮಿ ಕಾರ್ಮಿಕ ನಿರೀಕ್ಷಕಿ ಸಿಂಧನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.