ಶುಕ್ರವಾರ, ಮೇ 7, 2021
26 °C

ರಿಮ್ಸ್‌: ಕೋವಿಡ್‌ ವಿಭಾಗ ಅವ್ಯವಸ್ಥೆಯ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್‌ ಹಾಸಿಗೆಗಳಲ್ಲಿ ಕೆಲವು ಕಿತ್ತುಹೋಗಿದ್ದು, ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೋವಿಡ್‌ ದೃಢವಾದವರ ಪೈಕಿ ಬಹುತೇಕ ವಯೋವೃದ್ಧರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛಗೊಳಿಸದ ಕೋಣೆ. ದುರ್ವಾಸನೆ ಹಾಗೂ ಕಿತ್ತುಹೋಗಿರುವ ಹಾಸಿಗೆ ಗತಿ ಎನ್ನುವ ಪರಿಸ್ಥಿತಿಯನ್ನು ನೋಡಿ ರೋಗಿ ಸಂಬಂಧಿಗಳು ಮೌನರೋಧನ ಅನುಭವಿಸುವಂತಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಶಕ್ತಿ ಇಲ್ಲದವರು ರಿಮ್ಸ್‌ ಆಸ್ಪತ್ರೆಯತ್ತ ಹೋಗುತ್ತಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ 750 ಖಾಸಗಿ ಆಸ್ಪತ್ರೆ ಹಾಸಿಗೆಗಳು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಲಭ್ಯ ಇವೆ. ಅದರಲ್ಲಿ 400ಕ್ಕೂ ಹೆಚ್ಚು ಭರ್ತಿಯಾಗಿವೆ.

ರಿಮ್ಸ್‌ ಆಸ್ಪತ್ರೆಯಲ್ಲಿಯೂ ಸುಮಾರು 300 ಹಾಸಿಗೆ ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ.

‘ಆಸ್ಪತ್ರೆಗೆ ಕರೆದೊಯ್ದರೆ ಒಳ್ಳೆಯ ಚಿಕಿತ್ಸೆ ಕೊಟ್ಟು ಗುಣಮುಖ ಮಾಡುತ್ತಾರೆ ಅಂದುಕೊಂಡಿದ್ದೇವೆ. ಮಾತ್ರೆ, ಇಂಜೆಕ್ಷನ್‌ ಕೊಡುತ್ತಿದ್ದಾರೆ. ಆದರೆ, ಅಲ್ಲಿರುವ ಗಲೀಜು, ಕಿತ್ತುಹೋಗಿರುವ ಹಾಸಿಗೆಯಿಂದ ಮತ್ತಷ್ಟು ಕಷ್ಟವಾಗುತ್ತಿದೆ. ಬದುಕುವ ಆಸೆ ಹುಟ್ಟಿಸಬೇಕಾದ ಆಸ್ಪತ್ರೆ ಕೋಣೆಗಳು, ವಿರುದ್ಧ ಪರಿಸ್ಥಿತಿಯಲ್ಲಿವೆ’ ಎಂದು ಕೋವಿಡ್‌ ರೋಗಿ ಸಂಬಂಧಿ ತಾಹೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು