ಶನಿವಾರ, ಏಪ್ರಿಲ್ 10, 2021
30 °C

ರಾಯಚೂರು: ದೇವೇಗೌಡರ ಆರೋಗ್ಯಕ್ಕಾಗಿ ಸರ್ವಧರ್ಮ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಜಿಲ್ಲಾ ಜೆಡಿಎಸ್ ವತಿಯಿಂದ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು.

ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಹತ್ತಿರ ಪ್ರಾರ್ಥನೆ ಆಯೋಜಿಸಲಾಗಿತ್ತು. ಹಿಂದೂ, ಕ್ರೈಸ್ತ, ಮುಸ್ಲಿಂ ಹಾಗೂ ಜೈನ್ ಧರ್ಮದ ಗುರುಗಳಿಂದ ಸಾಮೂಹಿಕ  ಪ್ರಾರ್ಥನೆ ನಡೆಯಿತು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ‘ನಮ್ಮ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಬೇಗನೆ ಗುಣಮುಖ ಹೊಂದಲಿ ಎಂದು ಪಕ್ಷದ ಪ್ರಾರ್ಥನೆ ಮಾಡಲಾಗಿದೆ. ಅವರು ಮತ್ತೆ ಆರೋಗ್ಯ ಹೊಂದಿ ಪಕ್ಷದ ಸಂಘಟನೆಯಯಲ್ಲಿ ತೊಡಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ’ ಎಂದರು.

ಮುಖಂಡರ ಮಹಾಂತೇಶ ಪಾಟೀಲ, ಯೂಫಸ್ ಖಾನ್, ಎನ್. ಶಿವಶಂಕರ, ತಿಮ್ಮಾರೆಡ್ಡಿ, ಅಜಿತ ಸೇಠ, ರಾಮಕೃಷ್ಣ, ಆದಿರಾಜ, ವಿಶ್ವನಾಥ ಪಟ್ಟಿ, ನರಸಪ್ಪ ಆಶಾಪೂರ, ಅಮ್ಜದ, ಬಬ್ಲು, ಯಮಿನಿ, ಮಹೇಶ,ವೆಂಕಟೇಶ,ಕುಮಾರಸ್ವಾಮಿ, ಪಾರ್ಥ, ಈರಣ್ಣ ಯಾದವ, ನರಸಿಂಹಲು ಇದ್ದರು.

ಇದನ್ನೂ ಓದಿ... ಎಚ್.ಡಿ.ದೇವೇಗೌಡ ದಂಪತಿಗೆ ಕೋವಿಡ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು