ರಾಯಚೂರು: ‘ಜಿಲ್ಲೆಯಲ್ಲಿ ಮುಂಗಾರು ಮಳೆಗೆ ಭತ್ತದ ಬೆಳೆ ಹಾನಿಯಾಗಿದೆ. ರೈತರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಹೀಗಾಗಿ ಭತ್ತ ಬೆಳೆಯುವ ರೈತರ ಸ್ಥಿತಿ ಅತಂತ್ರವಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

‘ರೈತರ ಬೆಳೆ ಮುಂಗಾರು ಪೂರ್ವದಲ್ಲಿ ಹಾನಿಯಾದ ಬೆಳೆಯ ಸರ್ವೆ ಸರಿಯಾಗಿ ಮಾಡಿಲ್ಲ. ಬೇಸಿಗೆ ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪ್ರೀಮಿಯಂ ಕಟ್ಟಿದ ರೈತರಿಗೆ ಖಾತೆಗೆ ಪರಿಹಾರ ಒದಗಿಸಿಲ್ಲ’ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ಭತ್ತದ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕುಸಿದಿದೆ. ಆರ್ಎನ್ಆರ್ ಭತ್ತದ ಬೆಲೆ ಮಾರುಕಟ್ಟೆಯಲ್ಲಿ ₹1700 ರಿಂದ ₹1800 ಮಾರಾಟವಾಗುತ್ತಿದಿದೆ. ಆದರೆ, ಸರ್ಕಾರ ಬೆಂಬಲ ಬೆಲೆಯಡಿಯಲ್ಲಿ ₹2330 ಖರೀದಿ ಮಾಡುತ್ತಿದೆ. ಇದರಿಂದ ಪ್ರತಿ ಕ್ವಿಂಟಲ್ಗೆ ₹500 ನಷ್ಟವಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಖರೀದಿ ಕೇಂದ್ರ ಪ್ರಾರಂಭವಾದರೂ ರೈತರ ಬೆಳೆ ಇನ್ನೂ ತೆಗೆದುಕೊಂಡಿಲ್ಲ. ಖರೀದಿ ಕೇಂದ್ರದ ಎದುರು ಭತ್ತದ ತುಂಬಿದ ಟ್ರಾಕ್ಟರ್ ಮೂರು ದಿನಗಳ ಕಾಲ ನಿಲ್ಲುವಂತಹ ಸ್ಥಿತಿ ಇದೆ. ಅಧಿಕಾರಿಗಳು ತ್ವರಿತವಾಗಿ ನೋಂದಣಿ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ, ಜನಪ್ರತಿಧಿನಿಗಳು ನಿರ್ಲಕ್ಷ್ಯವೇ ಸ್ಪಷ್ಟವಾಗಿ ಎದ್ದುಕಾಣುತ್ತಿದೆ’ ಎಂದು ಆರೋಪಿಸಿದರು.

‘ಶಾಸಕರ ನೇತೃತ್ವದಲ್ಲಿ ನಡೆಯುವ ಸಮಿತಿ ಸಭೆಗಳಲ್ಲಿ ಅಂತಿಮ ತೀರ್ಮಾನವನ್ನೇ ಕೈಗೊಂಡಿಲ್ಲ. ನೀರಾವರಿಗಾಗಿ ನಾರಾಯಣಪುರ ಬಲದಂಡೆ ಯೋಜನೆಯ 18 ಉಪಕಾಲುವೆಗೆ ₹1460 ಕೋಟಿ ಮಂಜೂರಾದರೂ ಯೋಜನೆ ಯಥಾಸ್ಥಿತಿಯಲ್ಲಿದೆ’ ಎಂದು ಹೇಳಿದರು.

‘ದೇವದುರ್ಗ ತಾಲ್ಲೂಕಿನ ಕಾಕರಗಲ್ ಮತ್ತು ಜಾಲಹಳ್ಳಿ ನಡುವಿನ ರಸ್ತೆ ಮೇಲೆ ಟೋಲ್ಗೇಟ್ ಅನ್ನು ಅವೈಜ್ಞಾನಿಕವಾಗಿ ಸ್ಥಾಪಿಸಿದ್ದು, ರೈತರಿಗೆ ವಿನಾಯಿತಿಯನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

‘ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ದೇಶದಲ್ಲಿ ಪದೇಪದೇ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ನಾಗರಿಕರಲ್ಲಿ ಆತಂಕ ಉಂಟಾಗುತ್ತಿದೆ. ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ, ಬೂದಯ್ಯ ಸ್ವಾಮಿ, ಗೋವಿಂದ ನಾಯಕ, ರವಿ, ದೇವರಾಜ ನಾಯಕ, ನಾಗರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.