ಸಿಂಧನೂರು: ‘ಹೆಣ್ಣು ಮಕ್ಕಳೇ ಜಾನಪದ ಸಾಹಿತ್ಯದ ನಿಜವಾದ ವಾರಸುದಾರರು. ಅವರ ನೈಜ ಜೀವನ ಮತ್ತು ತಲ್ಲಣಗಳೇ ಸಾಹಿತ್ಯವಾಗಿ ರೂಪುಗೊಂಡಿವೆ’ ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಪ್ರೊ.ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಶಾರದಾ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಶಾಲೆ-ಕಾಲೇಜಿಗೆ ಒಂದು ಜಾನಪದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ ನಾಗಮ್ಮನ ಕಥೆ 680 ಪುಟಗಳ ಕಾವ್ಯವನ್ನು ಅನಕ್ಷರಸ್ಥ ಮಹಿಳೆ ಹಾಡಿದ್ದಾಳೆ. ಜುಂಜಪ್ಪನ ಕಾವ್ಯ, ಮಲೆ ಮಹದೇಶ್ವರ ಕಾವ್ಯ ಇದೆ. ಜನಪದ ಸಾಹಿತ್ಯದಲ್ಲಿ ಮೌಲ್ಯ ಮತ್ತು ಅಪಮೌಲ್ಯೀಕರಣ ಎರಡೂ ಇದೆ. ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಪಠ್ಯವನ್ನು ಸೇರ್ಪಡೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

‘ಜನಪರ ತ್ರಿಪದಿಗಳಲ್ಲಿ ಜೀವನ ಮೌಲ್ಯ’ ವಿಷಯ ಕುರಿತು ಮಾತನಾಡಿದ ನಿವೃತ್ತ ಕನ್ನಡ ಶಿಕ್ಷಕ ವೆಂಕನಗೌಡ ವಟಗಲ್, ‘ಜನಪದರು ಏನನ್ನು ಓದದೆ ಎಲ್ಲವನ್ನು ಹಾಡಿ, ಸೃಜಿಸುವ ಸಾಮರ್ಥ್ಯ ಪಡೆದವರು. ಹೆಣ್ಣು ಮಕ್ಕಳು ಆಯಾಸವಾಗಬಾರದು ಎಂದು ಕೆಲಸ ಮಾಡುವಾಗ ತ್ರಿಪದಿ ಕಟ್ಟುತ್ತಿದ್ದರು. ಜನಪದರು ದೇವರಿಗೆ ಸವಾಲು ಹಾಕಿದವರು. ಬೆಳಗಿನಿಂದ ರಾತ್ರಿವರೆಗೂ ಕಾಯಕದಲ್ಲಿ ಶ್ರದ್ಧೆ ಉಳ್ಳವರಾಗಿದ್ದರು. ಮದುವೆ ಮಾಡುವ ಮುಂಚೆಯೇ ತಾಯಂದಿರು ಮಕ್ಕಳಿಗೆ ಬದುಕಿನ ಮೌಲ್ಯ, ಪ್ರೀತಿಯನ್ನು ಕಲಿಸಿದವರು. ಉಪಕಾರ ಸ್ಮರಣೆ ಜನಪದರಲ್ಲಿ ಹೆಚ್ಚು ಕಾಣುತ್ತೇವೆ. ಆದರೆ ಇಂದು ಅದು ಮಾಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಾತನಾಡಿದರು. ಶಾರದಾ ಮಹಿಳಾ ಮಹಾವಿದ್ಯಾಲಯದ ಅಕ್ಕನಾಗಮ್ಮ ಶಿವನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಮಹಿಳಾ ಘಟಕದ ಸಂಚಾಲಕಿ ಮೇರಿ ಗ್ರೇಸಿ, ಶೋಭಾ ವಸ್ತ್ರದ್, ಉಪನ್ಯಾಸಕರಾದ ಶ್ರೀಮೃತ್ಯುಂಜಯ, ವೀರೇಶ ನಾಯಕ ಕನ್ನಾರಿ, ಶೋಭಾ ತೊರಗಲ್, ಕರಿಬಸವ, ದೊಡ್ಡಬಸವ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಂಜನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಧರ್ಮಣ್ಣ ಗೋನಾಳ ನಿರೂಪಿಸಿದರು. ಮಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಗೌರಿ ವಾಲೀಕಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.