ಮಸ್ಕಿ: ಅನುದಾನ ಕೊರತೆಯಿಂದ ಪಟ್ಟಣದ ಅಭಿವೃದ್ಧಿಗೆ ಅಡ್ಡಿಯಾಗಿದೆ. ವಸತಿ ಯೋಜನೆ ಅಡಿ ಬಡವರಿಗೆ ಹಂಚಿಕೆ ಮಾಡಲು ಮನೆಗಳೂ ಬರುತ್ತಿಲ್ಲ ಎಂದು ಸದಸ್ಯರು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಘಟನೆ ನಡೆಯಿತು.

ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿದ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಸೇರಿದಂತೆ ಅನೇಕ ಸದಸ್ಯರು,‘ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿ ಮನವಿ ಮಾಡೋಣ. ಸರ್ಕಾರದಿಂದ ವಿಶೇಷ ಅನುದಾನ ಹಾಗೂ ಮನೆಗಳನ್ನು ನೀಡುವಂತೆ ಪ್ರಸ್ತಾವ ಸಲ್ಲಿಸೋಣ’ ಎಂದರು.

‘ವಿಶೇಷ ಅನುದಾನ ಬಂದರೆ ಮಾತ್ರ ಪಟ್ಟಣದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ’ ಎಂದರು.

ಮುಂದಿನ ಸಭೆಗೆ ಶಾಸಕರನ್ನು ಆಮಂತ್ರಿಸಿ ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಅಷ್ಟರೊಳಗೆ ನಿಯೋಗ ತೆಗೆದುಕೊಂಡು ಮನವಿ ಸಲ್ಲಿಸೋಣ ಎಂದರು. ಇದಕ್ಕೆ ಸದಸ್ಯರು ಪಕ್ಷಾತೀತವಾಗಿ ಒಪ್ಪಿಗೆ ಸೂಚಿಸಿದರು.

ಹಳೆಯ ನಿಲ್ದಾಣದಲ್ಲಿನ ಬಸ್ ನಿಲುಗಡೆ ತೆಗೆದು ಅಶೋಕ ವೃತ್ತದ ಬಳಿ ಬಸ್ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಹಳೆಯ ಬಸ್ ನಿಲ್ದಾಣ, ಬಸವೇಶ್ವರ ವೃತ್ತದಲ್ಲಿಯೂ ಬಸ್ ನಿಲುಗಡೆ ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಬಸ್ ನಿಲ್ಲುವ ಸ್ಥಳಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಲು ಸಭೆಯಲ್ಲಿ ಸದಸ್ಯರು ಸೂಚಿಸಿದರು.

ಕುಡಿಯುವ ನೀರಿನ ಸಂಸ್ಕರಣಾ ಘಟಕಗಳನ್ನು ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸದಸ್ಯರು ತಿಳಿಸಿದರು. ಎಲ್ಲಾ ವಾರ್ಡ್ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.

ಚರ್ಚೆಯಲ್ಲಿ ಸದಸ್ಯ ದೊಡ್ಡ ಕರಿಯಪ್ಪ, ಮೌನೇಶ ಮುರಾರಿ, ರವಿಕುಮಾರ ಪಾಟೀಲ, ಸುರೇಶ ಹರಸೂರು, ಶರಣಯ್ಯ ಸೊಪ್ಪಿಮಠ, ಕೃಷ್ಣ ಡಿ.ಚಿಗರಿ, ಶಬ್ಬೀರ್ ಸಾಬ್, ಭರತ ಶೇಠ್ ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ, ಮುಖ್ಯಾಧಿಕಾರಿ ನರಸರಡ್ಡಿ, ಕಂದಾಯ ಅಧಿಕಾರಿ ಜಗದೀಶ, ಶಿವಣ್ಣ, ಲೆಕ್ಕಾಧಿಕಾರಿ ಬಸವರಾಜ, ಎಂಜಿನಿಯರ್ ಮಲ್ಲಿಕಾರ್ಜುನ ಸೇರಿದಂತೆ ಸಿಬ್ಬಂದಿ ಇದ್ದರು.

ಅ.7ರಂದು ನಡೆಯುವ ಭ್ರಮರಾಂಬ ದೇವಿ ಪುರಾಣ ಮೆರವಣಿಗೆ ಹಾಗೂ ಜಂಬೂ ಸವಾರಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಸಿಬ್ಬಂದಿ ಹಾಜರಿರಬೇಕು ಎಂದು ತಿಳಿಸಲಾಗಿದೆ
ಮಲ್ಲಯ್ಯ ಅಂಬಾಡಿ ಅಧ್ಯಕ್ಷರು ಪುರಸಭೆ

ಸಭೆಯಲ್ಲಿ ‘ಬಿ’ ಖಾತಾ ಚರ್ಚೆ

ಪಟ್ಟಣದಲ್ಲಿ ‘ಬಿ’ ಖಾತಾ ಕೊಟ್ಟಂಥ ನಿವೇಶನಗಳಿಗೆ ಕಟ್ಟಡ ಪರವಾನಗಿ ಕೊಡದಿರುವ ಬಗ್ಗೆ ಪುರಸಭೆ ಸದಸ್ಯ ಸುರೇಶ ಹರಸೂರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಕೆಲವೊಂದು ಬಡಾವಣೆಗಳಲ್ಲಿ ‘ಬಿ’ ಖಾತಾ ಕೊಡಲಾಗಿದೆ. ಆದರೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡುತ್ತಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಕಷ್ಟವಾಗಿದೆ. ಇದರಿಂದ ಪುರಸಭೆಗೆ ವರಮಾನ ಬರುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸುರೇಶ ಹರಸೂರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.