ಸೋಮವಾರ, ಜನವರಿ 17, 2022
18 °C

ಮುದಗಲ್: ಕನ್ನಡ ಬಾವುಟ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ಬಾವುಟದ ಮೆರವಣಿಗೆ ನಡೆಯಿತು.

ಸೀಕ್ರೆಟ್ ಹಾರ್ಟ್ ಇಂಗ್ಲಿಷ್‌ ಮಾಧ್ಯಮ ಶಾಲೆ ಆವರಣದಿಂದ ಪುರಸಭೆಯ ರಂಗಮಂದಿರದವರೆಗೂ ಭುವನೇಶ್ವರಿ ದೇವಿ ಭಾವಚಿತ್ರದ ಜತೆಗೆ 825 ಅಡಿ ಉದ್ದದ ಕನ್ನಡ ಬಾವುಟದ ಮೆರವಣಿಗೆ ಮಾಡಲಾಯಿತು. ನಂತರ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ, ಪೂಜೆ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿ ಪಾಷಾ ಧ್ವಜಾರೋಹಣ ನೆರವೇರಿಸಿದರು.

ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್, ಎಸ್.ಎನ್.ಖಾದ್ರಿ, ಅಜೀಜ್ ಪಾಷಾ, ಸಂತೋಷ ಸುರಪುರ, ನಗರ ಘಟಕದ ಅಧ್ಯಕ್ಷ ಸಾಬುಹುಸೇನ್, ಬಾಲಪ್ಪ ನಾಗರಾಳ, ದೌವಲಸಾಬ ಹಲ್ಕಾವಟಗಿ, ಮಾಹಾಂತೇಶ ಚೆಟ್ಟರ್, ಇಸ್ಮಾಯಿಲ್ ಬಳಿಗಾರ, ಜಮೀರ್, ಸೇರಿದಂತೆ ಶಾಲೆ ಮಕ್ಕಳು ಹಾಗೂ ಶಿಕ್ಷಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು