ರಾಯಚೂರು: ಕಾರ್ಮಿಕರು ಹೋರಾಟದಿಂದ ಪಡೆದ ಅನೇಕ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ, ಕಾರ್ಮಿಕ ವಿರೋಧಿ, ಕಾರ್ಮಿಕರಿಗೆ ಮರಣ ಶಾಸನವಾಗಿರುವ ನಾಲ್ಕು ಹೊಸ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಡೆಯನ್ನು ಎಐಸಿಸಿಟಿಯು ಪದಾಧಿಕಾರಿಗಳು ಖಂಡಿಸಿ ಕಾಯ್ದೆಯ ಕರಡು ಪ್ರತಿ ಸುಡುವ ಮೂಲಕ ನಗರದ ಟಿಪ್ಪು ಸುಲ್ತಾನ್ ಉದ್ಯಾನದ ಎದುರು ಪ್ರತಿಭಟನೆ ನಡೆಸಿದರು.

ದೇಶದಾದ್ಯಂತ ಕಾರ್ಮಿಕರು ಮತ್ತು ಕಾರ್ಮಿಕ ಪರ ಸಂಘಟನೆಗಳು, ಟ್ರೇಡ್ ಯೂನಿಯನ್ಗಳು ವಿರೋಧಿಸಿದರೂ ಕಾರ್ಮಿಕರ ಮನವಿ, ಹೋರಾಟವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಬಿಲ್ಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಿಂದ ಸಿಗಬೇಕಾದ ಎಲ್ಲಾ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು, ಕಾರ್ಮಿಕ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಈ ನಾಲ್ಕು ಕೋಡ್ಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಎಐಸಿಸಿಟಿ ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರದಾರ, ಮುಖಂಡರಾದ ಜಿಲಾನಿ ಪಾಷಾ, ಜಗದೀಶ, ನಿಸಾರ್ ಅಹ್ಮದ್, ಭೀಮಣ್ಣ, ಮೊಹಮ್ಮದ್ ಮೂವೀಸ್, ಹನೀಫ್ ಅಬಕಾರಿ, ಮಾರಣ್ಣ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.