ರಾಯಚೂರು: ಲೋಡಿಂಗ್ ಆನ್ ಲೋಡಿಂಗ್ ವಾರ್ನಿ ಮಾಮೂಲಿ ಹೆಸರಿನಲ್ಲಿ ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಕವಿತಾಳ ಗೂಡ್ಸ್ ಲಾರಿ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆಗುರುವಾರ ಮನವಿ ಸಲ್ಲಿಸಿದರು.

ವರ್ತಕರು ಹಾಗೂ ಕೈಗಾರಿಕೆಯವರು ಸರಕನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಾಣಿಕೆ ಮಾಡಲು ಲಾರಿಗಳನ್ನು ಬಾಡಿಗೆಗೆ ಪಡೆದುಕೊಂಡು ಅವರ ಸರಕನ್ನು ಲಾರಿಗಳ ಮೂಲಕ ಲೋಡ್, ಅನ್-ಲೋಡ್ ಮಾಡಲು ಕೊಡಬೇಕಾದ ಹಮಾಲಿ ವೆಚ್ಚವನ್ನು ತಾವೇ ಪಾವತಿಸದೇ ಲಾರಿಯವರಿಂದ ವಸೂಲಿ ಮಾಡಿತ್ತಿದ್ದಾರೆ ಎಂದು ಆರೋಪಿಸಿದರು.

ಮಾಮೂಲಿ ವಸೂಲಿಯಿಂದ ಲಾರಿ ಮಾಲೀಕರಿಗೆ ಅನ್ಯಾಯವಾಗುತ್ತಿದೆ. ವಾರ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಲಾರಿಯವರು ಇದಕ್ಕೆ ಒಪ್ಪದಿದ್ದಾಗ ವರ್ತಕರು ಲಾರಿಗಳನ್ನು ಲೋಡ್, ಅನ್ಲೋಡ್ ಮಾಡದೇ ಇರುವುದರಿಂದ ಲಾರಿಗಳನ್ನು ಹಾಗೇಯೇ ನಿಲ್ಲಿಸಿ ಲಾರಿ ಚಾಲಕರಿಗೆ ಮತ್ತು ಲಾರಿ ಮಾಲೀಕರಿಗೆ ಕಿರುಕುಳ ನೀಡುತ್ತಾರೆ ಎಂದು ದೂರಿದರು.

ಸಂಘದ ಅಧ್ಯಕ್ಷ ವೀರಭದ್ರಪ್ಪ ಸಾಹುಕಾರ ಬಾವಿಕಟ್ಟಿ, ಉಪಾಧ್ಯಕ್ಷ ದಾವುಲ್ ಸಾಬ್, ಲಾಲ್ ಸಾಬ್, ಕಲೀಂ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.