ಭಾನುವಾರ, ಫೆಬ್ರವರಿ 28, 2021
30 °C
ಪರಸ್ಪರ ಅಂತರ ಕಾಪಾಡಲು ಮದ್ಯದಂಗಡಿ ಮಾಲೀಕರ ಮನವಿ

ಮುಖಕ್ಕೆ ಮಾಸ್ಕ್, ಕೈ ಸ್ವಚ್ಛತೆಗೆ ಸ್ಯಾನಿಟೈಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಪಟ್ಟಣದ ಮದ್ಯ ಮಾರಾಟದ ಅಂಗಡಿಗಳಲ್ಲಿ ಸೋಮವಾರ ಮದ್ಯ ಮಾರಾಟ ಜೋರಾಗಿತ್ತು.

ಪಟ್ಟಣದ ಬಸವ ವೃತ್ತ ಸಮೀಪದ ಎಂಎಸ್‍ಐಎಲ್ ಮಾರಾಟ ಮಳಿಗೆ ಸೇರಿ 6 ಮದ್ಯದ ಅಂಗಡಿಗಳಲ್ಲಿ ಗ್ರಾಹಕರು ಮದ್ಯ ಖರೀದಿಸಿದರು. ಖರೀದಿಗೆ ಬರುವ ಗ್ರಾಹಕರ ನಡುವೆ ನೂಕು ನುಗ್ಗಲು ತಡೆಗಟ್ಟಲು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ ಸ್ಥಳ ಗುರುತು ಮಾಡಲಾಗಿತ್ತು.

ಬೆಳಿಗ್ಗೆ 9ರಿಂದಲೇ ಎಲ್ಲಾ ಅಂಗಡಿಗಳ ಮುಂದೆ ಗ್ರಾಹಕರು ಮದ್ಯ ಖರೀದಿಗಾಗಿ ಜಮಾಯಿಸಿದ್ದರು. ಗ್ರಾಹಕರು ಮದ್ಯ ಖರೀದಿಗಾಗಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ಪಟ್ಟಣದ ಬ್ಲೂ ಡೈಮಂಡ್ ಲಿಕ್ಕರ್ಸ್ ಮದ್ಯದ ಅಂಗಡಿಯಲ್ಲಿ ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಒದಗಿಸಲಾಗಿತ್ತು. ಮದ್ಯ ಖರೀದಿಸಿದವರು ಪಟ್ಟಣದ ಹೊರವಲಯದ ಜಮೀನು ಹಾಗೂ ತೋಟಗಳ ಕಡೆಗೆ ತೆರಳುತ್ತಿರುವುದು ಕಂಡು ಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು