ಸಿಂಧನೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಹಾಗೂ ಸದಸ್ಯೆ ಪ್ರಭಾವತಿ ಅವರಿಗೆ ಕೆಲ ದುಷ್ಕರ್ಮಿಗಳು ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿ ಕುಳುವ ಮಹಾಸಂಘ ತಾಲ್ಲೂಕು ಘಟಕದಿಂದ ಸೋಮವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

‘ಜು.5ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಒಳಮೀಸಲಾತಿ ವಿಚಾರಕ್ಕಾಗಿ 51 ಪರಿಶಿಷ್ಟ ಜಾತಿಗಳ ಪೈಕಿ 49 ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮದ ಮುಖಂಡರ ಸಭೆಯನ್ನು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸಭೆಗೆ ಕೊರಮ ಮತ್ತು ಕೊರಚ ಸಮಾಜದ ಮುಖಂಡರನ್ನು ಆಹ್ವಾನಿಸಿರಲಿಲ್ಲ. ಪಲ್ಲವಿ ಜಿ ಕೊರಮ ಸಮಾಜದವರಾಗಿದ್ದು, ಇವರು ಪ್ರಭಾವತಿ ಅವರೊಂದಿಗೆ ತೆರಳಿ ಸಭೆಗೆ ನಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಲೆಮಾರಿ ಜನಾಂಗದ ಮುಖಂಡರಾದ ಲೋಹಿತಾಕ್ಷ, ವೀರೇಶ, ಶಿವು ಬಳ್ಳಾರಿ, ಬಸವರಾಜ ನಾರಾಯಣಕರ್, ಸುಭಾಷ್ ಚೌವ್ಹಾಣ್, ಚಾವಡೆ ಲೋಕೇಶ್, ಶಾಂತಕುಮಾರ ಮತ್ತಿತರರು ಪಲ್ಲವಿ ಮತ್ತು ಪ್ರಭಾವತಿ ಅವರ ಮೇಲೆ ಮಾಡಿದ್ದು ಹೇಯ ಕೃತ್ಯವಾಗಿದೆ’ ಎಂದು ಕುಳುವ ಮಹಾಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ದೂರಿದರು.

‘ಹಲ್ಲೆ ನಡೆಸಿದಾಗ್ಯೂ ಮಾಜಿ ಸಚಿವ ಎಚ್.ಆಂಜನೇಯ ರಕ್ಷಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ. ಈ ಘಟನೆಯನ್ನು ಕೊರಮ ಮತ್ತು ಕೊರಚ ಸಮಾಜದವರು ಸಹಿಸುವುದಿಲ್ಲ. ಕೂಡಲೇ ಮುಖ್ಯಮಂತ್ರಿ ಅವರು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು.

ಕೊರಮ ಸಮಾಜದ ಮುಖಂಡರಾದ ಮರಿಯಪ್ಪ ತುರಡಗಿ, ಬಾಲಪ್ಪ ಮನ್ನಾಪುರ, ಯಮನಪ್ಪ ವಂಕಲಕುಂಟಿ, ಬಳ್ಳಾರೆಪ್ಪ ಹೊಗರನಾಳ, ಹನುಮಂತ ಕಾರಲಕುಂಟಿ, ಹನುಮಂತ ಸುಂಕೇಶ್ವರ, ಹನುಮಂತ ನಂದವಾಡಿಗಿ, ಯಲ್ಲಪ್ಪ ಉದ್ಬಾಳ, ಹನುಮಂತ ವಂಕಲಕುಂಟಿ, ಹುಲ್ಲಪ್ಪ ತುರಡಗಿ, ಬಸವರಾಜ ಎಲೆಕೂಡ್ಲಿಗಿ, ಸುಬ್ಬಣ್ಣ ಕುರುಕುಂದಾ, ಗುಡದಪ್ಪ ಕುರುಕುಂದಾ, ಮರಿಯಪ್ಪ ಬರಗೂರು, ಹುಲ್ಲಪ್ಪ ಉಪ್ಪಲದೊಡ್ಡಿ, ಹನುಮಂತ ಎಲೆಕೂಡ್ಲಿಗಿ, ದುರುಗಪ್ಪ ಪಗಡಂತ್, ಬಳ್ಳಾರೆಪ್ಪ, ಗೋವಿಂದ, ಹೊಳೆಯಪ್ಪ, ಮಹೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.