ಮುದಗಲ್ (ರಾಯಚೂರು ಜಿಲ್ಲೆ): ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹೊಂಬಳಕಲ್ ಗ್ರಾಮದ ಶಾಂಭವಿ ರೇವಣಸಿದ್ದಪ್ಪ ಹಿರೇಕುರಬರ ಅವರಿಗೆ ಪಟ್ಟಣದ ಬಳಿ ಭಾನುವಾರ ರಾತ್ರಿ ಹುಬ್ಬಳ್ಳಿ–ಹಟ್ಟಿ ಮಾರ್ಗದ ಬಸ್ನಲ್ಲಿ ಹೆರಿಗೆಯಾಗಿದೆ.

ಶಾಂಭವಿ ಅವರು ಕಾರವಾರಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಗರ್ಭಿಣಿಯಾಗಿದ್ದ ಅವರು ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಪಟ್ಟಣ ಸಮೀಪ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಆಶಾ ಕಾರ್ಯಕರ್ತೆ ಮೇರಿಯಮ್ಮ ನೆರವಾಗಿದ್ದಾರೆ. ಶಾಂಭವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೆರಿಗೆಯ ಬಳಿಕ ಬಸ್ ಚಾಲಕ ಸಿದ್ಧಲಿಂಗಪ್ಪ ಶಿರೂರು, ನಿರ್ವಾಹಕ ಬಸಯ್ಯ ಹಿರೇಮಠ ಅವರು ಶಾಂಭವಿ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅವಧಿ ಪೂರ್ವದಲ್ಲಿಯೇ ಹೆರಿಗೆಯಾದ ಕಾರಣ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.