ಭಾನುವಾರ, ಆಗಸ್ಟ್ 1, 2021
21 °C

ಸಿರುಗುಪ್ಪ | ಆಸ್ತಿ ವಿವಾದ, ಸೋದರಳಿಯರಿಂದ‌ ಮಾವನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಸೋದರಳಿಯಂದಿರು ತಮ್ಮ ಮಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದ ಜಮೀನಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ನಿವಾಸಿ ವಿರೂಪಾಕ್ಷಗೌಡ (48) ಕೊಲೆಯಾದವರು. ಅವರ ಅಕ್ಕನ ಮಕ್ಕಳಾದ ಮಲ್ಲಿಕಾರ್ಜುನ ಗೌಡ ಮತ್ತು‌ ಸಿದ್ದಬಸವನಗೌಡ ಪೊಲೀಸರಿಗೆ ರಾತ್ರಿಯೇ ಶರಣಾಗಿದ್ದಾರೆ
 
ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಷಯವಾಗಿ ವಿರೂಪಾಕ್ಷಗೌಡ ಹಾಗೂ ಅವರ ಸಹೋದರಿ ನಡುವಿನ ವಿವಾದ ತಾರಕಕ್ಕೇರಿ‌ ಕೊಲೆಯಲ್ಲಿ ಅಂತ್ಯವಾಗಿದೆ.

ಸಿರುಗುಪ್ಪ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದ ಸಿಬ್ಬಂದಿ  ಬಂಡ್ರಾಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು