ಬುಧವಾರ, ಅಕ್ಟೋಬರ್ 28, 2020
18 °C

ರಾಯಚೂರು: ನಗರಸಭೆ ಸದಸ್ಯ ಮಕ್ಬೂಲ್‌ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ವಾರ್ಡ್ ಸಂಖ್ಯೆ 8ರಿಂದ ನಗರಸಭೆಗೆ ಆಯ್ಕೆಯಾಗಿದ್ದ ಮಕ್ಬೂಲ್ (50) ಅವರನ್ನು ಸೋಮವಾರ ತಡರಾತ್ರಿ ಮಚ್ಚಿನಿಂದ ಕೊಚ್ಚಿ ಮಾಡಲಾಗಿದೆ.

ಜಾಕೀರ್ ಹುಸೇನ್ ವೃತ್ತದಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡು ಬಿದ್ದಿದ್ದ ಮಕ್ಬೂಲ್ ಅವರನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೂಡಲೇ ಮೃತಪಟ್ಟಿದ್ದಾರೆ‌.

ಮುಖ ಮರೆಮಾಡಿಕೊಂಡು ಬೈಕ್ ಮೇಲೆ‌ ಬಂದಿದ್ದ ಅಪರಚಿತ ಯುವಕರ ಗುಂಪು ಹತ್ಯೆ ನಡೆಸಿ ಪರಾರಿಯಾಗಿದೆ. ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ನಿಕ್ಕಂ ಅವರು ಅಪರಾಧಿಗಳ ಪತ್ತೆಗೆ ತಂಡ ರಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು