ರಾಯಚೂರು: ‘ಮುಖದ ಮೂಳೆ ಮುರಿತ, ಇಂಪ್ಲಾಂಟ್ ಪ್ಲಾನಿಂಗ್, ದವಡೆಗಳ ಆರ್ಥೊಡೆಂಟಿಕ್ ಬೆಳವಣಿಗೆಯ ಮೌಲ್ಯಮಾಪನ ನಿರ್ಣಯಿಸಲು ಸಹಾಯಕವಾಗುವ ಅತ್ಯಾಧುನಿಕ 3ಡಿ ಡೈಮೆನ್ಷನಲ್ ಕೋನ್ ಬೀಮ್ ಕಂಪ್ಯೂಟರೈಸ್ಡ್ ಟೊಮೊಗ್ರಫಿ ಇಮೇಜಿಂಗ್ ಉಪಕರಣ ಅಳವಡಿಸಲಾಗಿದೆʼ ಎಂದು ನವೋದಯ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಡಾ.ಅಮೃತ್ ರೆಡ್ಡಿ ಹೇಳಿದರು.

ನಗರದ ನವೋದಯ ದಂತ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿಅಳವಡಿಸಿದ ನೂತನ ಉಪಕರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ಯಾರಾನಾಸಲ್ ಸೈನಸ್ಗಳು, ಮಧ್ಯ ಕಿವಿಯ ರೋಗಶಾಸ್ತ್ರದ ವಾಯುಮಾರ್ಗ ವಿಶ್ಲೇಷಣೆ ನಿರ್ಣಯಿಸಲು ಇಎನ್ಟಿ ವಿಭಾಗದಲ್ಲಿಯೂ ಈ ಯಂತ್ರ ಉಪಯುಕ್ತವಾಗಿದೆ’ ಎಂದು ಹೇಳಿದರು.

ನವೋದಯ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಎಸ್.ಆರ್. ರೆಡ್ಡಿ, ರಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ, ಡಾ.ವಿಜಯ ಕುಮಾರ, ನವೋದಯ ದಂತ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ ಕಟ್ಟಿ, ಡಾ. ದೇವಾನಂದ, ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ವಿಜೇಂದ್ರ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ.ಅರುಣ ನಾಯಕ, ಡಾ.ಆನಂದ, ಡಾ.ದೊಡ್ಡಯ್ಯ, ಪ್ರೊ. ಎಚ್.ಟಿ. ಸುತನಕುಮಾರಿ, ಡಾ.ಉಮಾಕಾಂತ ದೇವರಮಣಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.