ರಾಯಚೂರು: ಜೆಸ್ಕಾಂ ಉಪ-ವಿಭಾಗ-1ರ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಅನಿಯಮಿತ ಲೋಡ್ಶೆಡ್ಡಿಂಗ್, ನಿರಂತರ ವಿದ್ಯುತ್ ಕಡಿತ ಹಾಗೂ ಗ್ರಾಹಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡದಿರುವ ಬಗ್ಗೆ ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಡ್ಯಾಡಿಕಾಲೊನಿ, ಕಾಕತೀಯ ಕಾಲೊನಿ ಸೇರಿದಂತೆ ನಗರದ ಬಹುತೇಕ ಕಡೆ ನಿತ್ಯ ಎರಡು ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ದಿನವಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಗ್ರಾಹಕರು ಸಮಸ್ಯೆಗೆ ಒಳಗಾಗಿದ್ದಾರೆ ಎಂದು ದೂರಿದರು.

ಜೆಸ್ಕಾಂ ಅಧಿಕಾರಿಗಳು ಎರಡು ತಿಂಗಳ ಅವಧಿಯಲ್ಲೇ ಕೇವಲ ಎರಡೇ ಬಾರಿ ವಾರ್ತಾ ಇಲಾಖೆಯ ಮೂಲಕ ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ. ಮುಂಚಿತವಾಗಿ ಪ್ರಕಟಣೆ ಕೊಡದೇ ತಿಂಗಳ ಪೂರ್ತಿ ನಿತ್ಯ ಎರಡು ತಾಸು ಸಂಜೆ ವೇಳೆಯಲ್ಲೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಡ್ಯಾಡಿ ಕಾಲೊನಿ ಮುಖ್ಯ ರಸ್ತೆಯ ಅಂಚಿನಲ್ಲಿರುವ ಮನೆ ಎದುರು ಅಧಿಕ ಸಾಮರ್ಥ್ಯದ ವಿದ್ಯುತ್ ಲೈನ್ ಎಳೆಯಲಾಗಿದೆ. ತಂತಿಗೆ ಕೇಬಲ್ ಅಳವಡಿಸುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೊದಲ ಮಹಡಿ ಮೇಲೆ ನಿಂತರೆ ವಿದ್ಯುತ್ ತಂತಿಗಳು ಕೈಗೆ ತಾಗುತ್ತಿವೆ. ವಿದ್ಯುತ್ ತಗುಲಿ ಜೀವ ಹಾನಿ ಆದರೆ ಅದಕ್ಕೆ ಜೆಸ್ಕಾಂ ಅಧಿಕಾರಿಗಳೇ ಹೊಣೆ ಆಗಿದ್ದಾರೆ. ಈಗಾಗಲೇ ಲಿಖಿತವಾಗಿಯೂ ಮನವಿ ಮಾಡಿಕೊಳ್ಳಲಾಗಿದೆ. ಜೀವ ರಕ್ಷಣೆ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಏಕೆ ಎಂದು ಗ್ರಾಹಕ ಮಹಮ್ಮದ್ ಪ್ರಶ್ನಿಸಿದರು.

ರಸ್ತೆ ಬದಿಗೆ ಟಿಸಿ ಅಳವಡಿಸಿದರೂ ಅದರ ಸುತ್ತ ಬೇಲಿ ಹಾಕಿಲ್ಲ. ವಿದ್ಯುತ್ ಪ್ರವಹಿಸಿ ಈಗಾಗಲೇ ಎರಡು ದನಗಳು ಸತ್ತಿವೆ. ಇನ್ನು ಮನುಷ್ಯರು ಸತ್ತ ಮೇಲೆ ಬೇಕಿ ಹಾಕುತ್ತೀರಾ ಎಂದು ಗ್ರಾಹಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವ ಕಾರಣ ಗ್ರಾಹಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸಿಬ್ಬಂದಿ ಕಾರ್ಯವೈಖರಿಯಲ್ಲಿ ಸುಧಾರಣೆಯಾಗದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ‘ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಎಚ್ಚಸಿದರು.

ಟಿಸಿ ಸುತ್ತ ಬೇಲಿ ಹಾಕಿದರೆ ಜನ ಕಸ ಎಸೆದು ಹೊಲಸು ಮಾಡುತ್ತಿದ್ದಾರೆ. ಜನರು ಸಹಕಾರ ನೀಡದಿದ್ದರೆ ನಮಗೂ ಸಮಸ್ಯೆ ಆಗುತ್ತಿದೆ. ಕೆಲವು ಕಡೆ 10X10 ಅಡಿ ಜಾಗ ಬೇಕು ಅಂದಾಗ ಮಾತ್ರ ಬೇಲಿ ಹಾಕಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಜೆಸ್ಕಾಂನಲ್ಲಿ ಅಧಿಕಾರಿಗಳ ಅನೇಕ ಹುದ್ದೆಗಳು ಖಾಲಿ ಇವೆ. ಒಬ್ಬರು ಎರಡು ಹುದ್ದೆಗಳ ಪ್ರಭಾರ ನೋಡಿಕೊಳ್ಳಬೇಕಾಗಿದೆ. ಸಿಬ್ಬಂದಿ ಕೊರತೆ ಇರುವ ಕಾರಣ ಕೆಲಸದ ಹೊರೆ ಹೆಚ್ಚಿದೆ. ಸಮಸ್ಯೆಗಳು ಅಧಿಕ ಇವೆ. ಹೀಗಾಗಿ ತಕ್ಷಣಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

‘ಮೂರು ಮನೆಗಳಿಗೆ ಹಳೆಯ ಮೀಟರ್ ತೆಗೆದರೂ ವಿದ್ಯುತ್ ಬಿಲ್ ಕೊಡುತ್ತಿದ್ದಾರೆ. ಮೀಟರ್ ಇಲ್ಲದವರಿಗೂ ಬಿಲ್ ಕೊಡಲಾಗುತ್ತಿದೆ. ಇಂತಹ ಅಚಾತುರ್ಯ ಸರಿಪಡಿಸಿ‘ ಎಂದು ಗ್ರಾಹಕರೊಬ್ಬರು ಒತ್ತಾಯಿಸಿದರು.

ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ವೆಂಕಟೇಶ, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ದೇಸಾಯಿ, ಎಂಜಿನಿಯರ್ ಮಹಮದ್ ಶಫಿ, ಸೆಕ್ಟರ್ ಎಂಜಿನಿಯರ್ ರವಿಚಂದ್ರ ಹಾಜರಿದ್ದರು.

ನಗರಸಭೆಯ ವಾರ್ಡ್ 20, ಮಡ್ಡಿಪೇಟೆ, ಮಕ್ತಲಪೇಟೆಯಲ್ಲಿ ನಿತ್ಯ ಎರಡು ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ರಾಯಚೂರು ನಗರದಲ್ಲಿ ಹೊಸ ವಿದ್ಯುತ್ ಲೈನ್ ಅಳವಡಿಸುವ ಕಾರ್ಯ ನಡೆದಿದ್ದು ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲ ಸಮಸ್ಯೆ ಇತ್ಯರ್ಥಗೊಳ್ಳಲಿವೆ
ಚಂದ್ರಶೇಖರ ದೇಸಾಯಿ ಕಾರ್ಯನಿರ್ವಾಹಕ ಎಂಜಿನಿಯರ್

ಇನ್ನೂ ಮೂರು ದಿನ ಬೇಕು:

‘ಡ್ಯಾಡಿ ಕಾಲೊನಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸಲು ಇನ್ನು ಮೂರು ದಿನಗಳಾದರೂ ಬೇಕಾಗಲಿದೆ. ಸಮಯ ನೋಡಿಕೊಂಡು ಒಂದೊಂದು ದಿನ ವಿದ್ಯುತ್ ಕಡಿತಗೊಳಿಸಿ ಹೊಸ ಲೈನ್ ಹಾಕುತ್ತಿದ್ದೇವೆ. ಒಮ್ಮೆ ಈ ಕೆಲಸ ಮುಗಿದರೆ ವಿದ್ಯುತ್ ಕಡಿತಗೊಳಿಸುವ ಸಮಸ್ಯೆ ನಿವಾರಣೆಯಾಗಲಿದೆ‘ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ದೇಸಾಯಿ ತಿಳಿಸಿದರು. ‘ನಗರದ ಯಾವುದೇ ಪ್ರದೇಶದಲ್ಲೂ ವಿದ್ಯುತ್ ಕಡಿತಗೊಳಿಸುವ ಮೊದಲು ಪತ್ರಿಕಾ ಪ್ರಕಟಣೆ ಕೊಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.