ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ಗರಿಷ್ಠ ತಾಪಮಾನ: ರಣ ಬಿಸಿಲಿಗೆ ತತ್ತರಿಸಿದ ಜನ

ತಾಪಮಾನ 43.5 ಡಿಗ್ರಿ ಸೆಲ್ಸಿಯಸ್‌ ದಾಖಲು
Last Updated 8 ಮೇ 2019, 20:00 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಇಳಿಮುಖವಾಗದ ಬಿಸಿಲಿನ ತಾಪದಿಂದ ಜನರು ತತ್ತರಿಸಿ ಹೋಗಿದ್ದು, ಕೂಲರ್‌, ಫ್ಯಾನ್‌ ಹಾಗೂ ಎ.ಸಿ.ಗಳ ಎದುರು ಹಗಲಿರುಳು ಕಳೆಯುವುದು ಅನಿವಾರ್ಯವಾಗಿದೆ.

ಈ ವರ್ಷ ಬೇಸಿಗೆಯಲ್ಲಿ ಮೇ 8 ರಂದು 43.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಕಳೆದ ತಿಂಗಳು ಏಪ್ರಿಲ್‌ನಲ್ಲಿ ಗರಿಷ್ಠ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಹಂತಕ್ಕೆ ತಲುಪಿದ್ದ ಬೇಸಿಗೆ ಬಿಸಿಲು ಏರುಗತಿಯಲ್ಲಿಯೇ ಮುಂದುವರಿದಿದೆ. ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಜನಜೀವನ ಸ್ವಲ್ಪ ಅಸ್ತವ್ಯಸ್ತವಾಗಿದೆ. ಮುಖ್ಯವಾಗಿ ಶಿಶುಗಳಿಗೆ, ಬಾಣಂತಿಯರಿಗೆ ಹಾಗೂ ಇಳಿವಯಸ್ಸಿನವರಿಗೆ ನಿರ್ಜಲೀಕರಣ ಸಮಸ್ಯೆ ಕಾಣಿಸುತ್ತಿದೆ.

‘ಅತಿಯಾದ ತಾಪಮಾನದಿಂದ ಮೈಯಲ್ಲಿ ಬೆವರು ಸುರಿಯುವುದು ಸಾಮಾನ್ಯವಾಗಿ ಹೆಚ್ಚಾಗುತ್ತಿದೆ. ಇದರಿಂದ ತಲೆಯಲ್ಲಿ, ಕೈಕಾಲುಗಳ ಸಂದಿಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಬಿಸಿಲಿನಿಂದ ಚರ್ಮರೋಗ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬರುತ್ತಿವೆ ಹಾಗೂ ಕಿಡ್ನಿಗಳಲ್ಲಿ ಹರಳು ಇರುವವರು ಬೇಸಿಗೆಯಲ್ಲಿ ಅತಿಯಾದ ನೋವು ಸಹಿಸಿಕೊಳ್ಳಲು ಸಾಧ್ಯವಾಗದೆ ಆಸ್ಪತ್ರೆಗೆ ಬರುತ್ತಿದ್ದಾರೆ. ಬರೀ ನಿರ್ಜಲೀಕರಣ ಸಮಸ್ಯೆಯಿದ್ದರೆ, ಸಲಾಯಿನ್‌ ಮೂಲಕ ಕೂಡಲೇ ನಿಯಂತ್ರಣಕ್ಕೆ ತರಬಹುದು. ಆದರೆ, ಚರ್ಮರೋಗ ಉಲ್ಭಣಿಸಿದರೆ ಬೇಗನೆ ಗುಣಮುಖ ಆಗುವುದಿಲ್ಲ. ನಿರಂತರ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ರಿಮ್ಸ್‌ನಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ರಿಮ್ಸ್‌ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಗಳಲ್ಲಿ ಸಂಕಷ್ಟ: ಅತಿಯಾದ ಬಿಸಿಲಿನಿಂದಾಗಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಪಡೆಯುವುದಕ್ಕೆ ಜನರು ಹರಸಾಹಸ ಪಡುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಪ್ರತಿದಿನ ಸ್ನಾನ ಮಾಡುವುದು ಅನೇಕ ಕಡೆಗಳಲ್ಲಿ ದುಸ್ತರವಾಗಿದೆ.

ಜಾನುವಾರುಗಳಿಗೆ ನೀರು ಒದಗಿಸುವುದು ದೊಡ್ಡ ತಾಪತ್ರಯವಾಗಿದೆ. ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ಕಾಲುವೆಗಳ ಮೂಲಕ ತುಂಬಿಸಿರುವ ಕೆರೆಗಳು ಬಿಸಿಲಿನ ತಾಪಕ್ಕೆ ಬರಿದಾಗುತ್ತಿವೆ.

ರಾಯಚೂರು ಜಿಲ್ಲೆಯಲ್ಲಿ ಮೇ ತಿಂಗಳಿನ ಬಿಸಿಲು

ವರ್ಷ ತಾಪಮಾನ (ಡಿಗ್ರಿ ಸೆಲ್ಸಿಯಸ್‌)

2018/ 42.9

2017/ 43.4

2016/ 42.9

2015/ 43.4

2014/ 42.6

2013/ 42.8

2012/ 43

2011/ 41.8

2010/ 43.8

2009/ 43.4

ಮೂಲ: ಹವಾಮಾನ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT