ಮಸ್ಕಿ: ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಮಸ್ಕಿ ತಾಲ್ಲೂಕು ಅಗ್ರ ಸ್ಥಾನದಲ್ಲಿದೆ. 2.34 ಲಕ್ಷ ಜನಸಂಖ್ಯೆಯಲ್ಲಿ 1.85 ಲಕ್ಷ ಜನರ ಸಮೀಕ್ಷೆ ಮಾಡಲಾಗಿದ್ದು, ಶೇ 81ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.

ಸಮೀಕ್ಷೆ ವೇಳೆ 6 ವರ್ಷದೊಳಗಿನ ಮಕ್ಕಳ ಸಂಖ್ಯೆ ಕಡಿಮೆ ಕಂಡು ಬಂದಿದ್ದು, ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ತೆರಳಿ ಮಕ್ಕಳನ್ನು ಸಹ ಸಮೀಕ್ಷೆಯಲ್ಲಿ ಸೇರ್ಪಡೆಗೊಳಿಸಲು ತಂಡಗಳನ್ನು ರಚಿಸಲಾಗಿದೆ. ಮಕ್ಕಳ ಮೂಲಕ ತಂದೆ–ತಾಯಿ ಹೆಸರು ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ, ಸಮೀಕ್ಷೆಯಲ್ಲಿ ಮಕ್ಕಳನ್ನು ಸೇರಿಸುವ ಕೆಲಸ ನಡೆದಿದೆ.

ಸಮೀಕ್ಷೆದಾರರು, ಮನೆಗಳಿಗೆ ಭೇಟಿ ನೀಡಿದಾಗ ಕೆಲವರು ಮಾಹಿತಿ ನೀಡಿಲ್ಲ ಎಂದು ಅಂಗನವಾಡಿ ಮೇಲ್ವಿಚಾರಕರೊಬ್ಬರು, ತಹಶೀಲ್ದಾರ್ ಹಾಗೂ ತಾ.ಪಂ ಇಒ ಮುಂದೆ ನಡೆದ ಘಟನೆ ವಿವರಿಸಿದರು.

‘ಸಮೀಕ್ಷೆದಾರರಿಗೆ ಮಾಹಿತಿ ನೀಡದ ನೌಕರರ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ, ಆ ನೌಕರನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ವಿಚಾರಿಸಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಬೋಗಾವತಿ ತಿಳಿಸಿದ್ದಾರೆ.

ತಾ.ಪಂ ಇಒ ಅಮರೇಶ ಯಾದವ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶಿವಲೀಲಾ ಹಿರೇಮಠ, ಪ್ರಕಾಶ ನಾಯ್ಕ, ರಮೇಶ, ರವಿಕಮಾರ ಸಜ್ಜನ ಹಾಜರಿದ್ದರು.

ಪುರಸಭೆಯಲ್ಲೂ 80ರಷ್ಟು ಸಮೀಕ್ಷೆ ಪೂರ್ಣ:

‘ಮಸ್ಕಿ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಗಣತಿ ಶೇ 80ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದ್ದಾರೆ.

‘ಎಲ್ಲಾ ವಾರ್ಡ್ಗಳಲ್ಲಿ ಪುರಸಭೆಯ ಸಿಬ್ಬಂದಿ ತಂಡ ರಚನೆ ಮಾಡಿ, ಸಮೀಕ್ಷೆದಾರರಿಗೆ ಸಹಕರಿಸಬೇಕು. ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಸೂಚಿಸಲಾಗಿದೆ. ಎರಡು ದಿನಗಳಲ್ಲಿ ನೂರರಷ್ಟು ಗುರಿ ಮುಟ್ಟುತ್ತೇವೆ’ ಎಂದು ನರಸರಡ್ಡಿ ತಿಳಿಸಿದ್ದಾರೆ.

ಸಮೀಕ್ಷೆ 18 ರಂದು ಪೂರ್ಣಗೊಳ್ಳಲಿದ್ದು ನೂರರಷ್ಟು ಗುರಿ ಮುಟ್ಟಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ
ಮಂಜುನಾಥ ಬೋಗಾವತಿ ತಹಶೀಲ್ದಾರ್ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.