ಹಟ್ಟಿ ಚಿನ್ನದ ಗಣಿ: ಮಾರ್ಚ್ ತಿಂಗಳು ಆರಂಭದಲ್ಲೇ ಬೇಸಿಗೆಯ ತಾಪದಿಂದ ತತ್ತರಿಸಿ ಹೋಗಿರುವ ಇಲ್ಲಿನ ಜನರು ತಂಪು ಪಾನೀಯ, ಹಣ್ಣಿನ ರಸದ ಮೊರೆ ಹೋಗಿದ್ದಾರೆ. ಸುಡು ಬೇಸಿಗೆಯ ದಿನಗಳಲ್ಲಿ ಬಡವರ ಫ್ರಿಡ್ಜ್ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.

ಪಟ್ಟಣದ ಸಂತೆ ಬಜಾರ್, ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಣ್ಣಿನ ಮಡಿಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.

2 ಲೀಟರ್ನಿಂದ 150 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮಡಿಕೆಗಳು ಮಾರಾಟಕ್ಕಿವೆ. ₹100ರಿಂದ ₹600ರವರೆಗೆ ಬೆಲೆ ಇದೆ. ಕೆಂಪು ಮಣ್ಣಿನಲ್ಲಿ ಮಡಿಕೆ ತಯಾರಿಸಲಾಗುತ್ತದೆ. ಈ ಮಡಿಕೆಗಳಲ್ಲಿ ನೀರು ಇಟ್ಟರೆ ತಣ್ಣಗೆ ಇರುತ್ತದೆ. ಹೆಚ್ಚಿನ ಜನರು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಪ್ರತಿ ನಿತ್ಯ 20ರಿಂದ 25 ಮಡಿಕೆಗಳು ಮಾರಾಟವಾಗುತ್ತವೆ ಎನ್ನುತ್ತಾರೆ ಕುಂಬಾರರು.

ರಾಜಸ್ಥಾನದ ಮಡಿಕೆಗಳು, ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಯ ಮೂಲಕ ಹಟ್ಟಿ ಪಟ್ಟಣಕ್ಕೆ ತರಿಸಲಾಗುತ್ತದೆ. ಸಾರಿಗೆ ವೆಚ್ಚ ತೆಗೆದು ಒಂದು ಮಡಿಕೆಗೆ ₹100ರಿಂದ ₹250 ಉಳಿಯುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಜನರು ಕೂಡ ಇಲ್ಲಿಂದ ಮಡಿಕೆ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆಧುನಿಕ ಯುಗದಲ್ಲಿ ವ್ಯಾಪಾರ ಮಾಡುವುದು ಬಹಳ ಕಷ್ಟ. ಜನರು ಆನ್ಲೈನ್ ಮೂಲಕ ಮಡಿಕೆ ಖರೀದಿಸುತಿದ್ದಾರೆ ಎಂದು ಬೇಸರಿಸುತ್ತಾರೆ ಕುಂಬಾರರು.

ರಾಜಸ್ಥಾನದ ಮಡಿಕೆಗಳು ಕೆಂಪು ಮಣ್ಣಿನಿಂದ ಮಾಡಿದ್ದು, ಜನರನ್ನು ಆಕರ್ಷಿಸುತ್ತಿವೆ. ಸ್ಧಳೀಯ ಕಪ್ಪು ಮಣ್ಣಿನ ಮಡಿಕೆಗಳನ್ನು ಜನರು ಕೊಂಡುಕೊಳ್ಳುವುದು ಕಡಿಮೆಯಾಗಿದೆ. ಕಳೆದ ವರ್ಷ ವ್ಯಾಪರ ಚೆನ್ನಾಗಿತ್ತು. ಈ ಭಾರಿ ಮಡಿಕೆಯ ಬೆಲೆ ಏರಿಕೆಯಿಂದ ಜನರು ದೊಡ್ಡ ಮಡಿಕೆ ಬದಲು ಚಿಕ್ಕ ಮಡಿಕೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರಾಜಸ್ಥಾನದ ಮಡಿಕೆಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿ ದೇವಮ್ಮ.

ಬೇಸಿಗೆ ಕಾಲ ಬಂದಾಗ ಮಾತ್ರ ಮಡಿಕೆಗಳು ಮಾರಾಟವಾಗುತ್ತವೆ. ಉಳಿದ ದಿನಗಳಲ್ಲಿ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ
ಚಂದಣ್ಣ ಕುಂಬಾರ, ಗಲಗ ಹಟ್ಟಿ

ದುಡ್ಡು ಇದ್ದ ಜನರು ಫ್ರಿಡ್ಜ್ ತೆಗೆದುಕೊಳ್ಳುತ್ತಾರೆ. ಬಡವರು ಬೇಸಿಗೆಯ ದಾಹ ನೀಗಿಸಲು ಮಣ್ಣಿನ ಮಡಿಕೆಗೆ ಮೊರೆ ಹೋಗಿದ್ದಾರೆ.
ಶಶಿ ಬಡಿಗೇರ, ವ್ಯಾಪಾರಸ್ಧ ಹಟ್ಟಿ ಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.