ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚುಗೆ ಗಳಿಸಿದ ಮಕ್ಕಳ ವಿಜ್ಞಾನ ಹಬ್ಬ

Last Updated 10 ಡಿಸೆಂಬರ್ 2019, 15:32 IST
ಅಕ್ಷರ ಗಾತ್ರ

ಕನಕಪುರ: ಮಕ್ಕಳ ವಿಜ್ಞಾನ ಹಬ್ಬ ವೈಜ್ಞಾನಿಕ ಕಲಿಕೆಗೆ ತುಂಬಾ ಉಪಯುಕ್ತ. ಬಾಣಂತ ಮಾರಮ್ಮ ಸರ್ಕಾರಿ ಶಾಲೆಗೆ ಈ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ನಗರಸಭೆ ಸದಸ್ಯ ಸ್ಟುಡಿಯೂ ಚಂದ್ರು ಹೇಳಿದರು.

ಇಲ್ಲಿನ ಬಾಣಂತಮಾರಮ್ಮ ಸರ್ಕಾರಿ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ ಮಕ್ಕಳ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಮಕ್ಕಳಲ್ಲಿ ಬದಲಾವಣೆ ಮೂಡಲು ಸಾಧ್ಯವಾಗಲಿದೆ. ಹೊಸ ವಿಚಾರ ಕಲಿಕೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಮೋಹನ್‌ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಸಿಗುವ ಎಲ್ಲ ಸವಲತ್ತು ಸರ್ಕಾರಿ ಶಾಲೆಯಲ್ಲೂ ಸಿಗಬೇಕು. ಇಂತಹ ವಿಶೇಷ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡುತ್ತದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಕ್ರಿಯಾತ್ಮಕ ಚಟುವಟಿಕೆ ಶ್ಲಾಘನೀಯ ಎಂದು ನಗರಸಭೆ ಸದಸ್ಯ ರಾಮು ಹೇಳಿದರು.

ಸರ್ವ ಶಿಕ್ಷಣ ಅಭಿಯಾನದಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಎರಡು ದಿನಗಳ ಮಕ್ಕಳ ವಿಜ್ಞಾನ ಹಬ್ಬ ಆಚರಿಸಲಾಗಿದೆ. ತಾಲ್ಲೂಕಿನ ಆಯ್ದ ಕ್ಲಸ್ಟ್‌ರಗಳಲ್ಲಿ ನಾಲ್ಕು ಕಡೆ ನಡೆಸಲಾಗಿದೆ. ಉತ್ತಮವಾಗಿ ಮಾಡಿದವರಿಗೆ ಬಹುಮಾನ ಇದೆ. ಇದನ್ನು ಸಾರ್ವಜನಿಕರ ಸಹಕಾರದೊಂದಿಗೆ ಎಲ್ಲ ಕಡೆ ನಡೆಸಲಾಗುತ್ತಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್‌ ತಿಳಿಸಿದರು.

ನಗರದ ಎಲ್ಲ ಸರ್ಕಾರಿ ಶಾಲೆಗಳಿಂದ 150ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಂಡಿ ನಾಗರಾಜು ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಜೋಡಿ ಎತ್ತುಗಳನ್ನು ಮೆರವಣಿಗೆಗೆ ಕರೆ ತಂದಿದ್ದರು. ಮಲ್ಲೇಶ ಎಂಬುವರು ಮಹಿಷಿ ವೇಷ ಧರಿಸಿದ್ದರು. ಸಿಆರ್‌ಪಿ ಎಸ್‌.ರಾಘವೇಂದ್ರಸ್ವಾಮಿ, ಬಾಣಂತಮಾರಮ್ಮ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಾಮು, ಇತರ ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT