ಮಾಗಡಿ: ತಾಲ್ಲೂಕಿನ ಬ್ಯಾಲಕೆರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ₹ 5.85 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ. ಪುರುಷೋತ್ತಮ ಹೇಳಿದರು.

ತಾಲ್ಲೂಕಿನ ಬ್ಯಾಲದ ಕೆರೆ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಂಘದಲ್ಲಿ ರೈತರಿಗೆ ಸಾಲ ಸೌಲಭ್ಯ ಮಾತ್ರ ಇದೆ. ಅಕ್ಕಿ ವಿತರಣೆ ಸೌಲಭ್ಯವೂ ನಮ್ಮಲ್ಲೇ ಇದ್ದಿದ್ದರೆ ಇನ್ನೂ ಹೆಚ್ಚು ಲಾಭ ಕಾಣಬಹುದಾಗಿತ್ತು. ಯಾವುದೇ ಬ್ಯಾಂಕಿನಿಂದ ಸಾಲ ಮಾಡದೆ ₹ 15 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ವಿವರಿಸಿದರು.

ಒಟ್ಟು 1256 ಜನ ಸದಸ್ಯರನ್ನು ಒಳಗೊಂಡಿದ್ದು, 708 ಜನಕ್ಕೆ ₹3.82 ಕೋಟಿ ಸಾಲ ವಿತರಣೆ ಮಾಡಲಾಗಿದೆ. 32 ಮಹಿಳಾ ಗುಂಪುಗಳಿಗೆ ₹ 8 ಲಕ್ಷ, ಎನ್‌ಎಫ್‌ಸಿ ಅಡಿಯಲ್ಲಿ ₹ 14 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಜಿಲ್ಲಾ ಬ್ಯಾಂಕಿನಲ್ಲಿ ₹ 30.86 ಲಕ್ಷ ಷೇರು ಇಡಲಾಗಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ವೆಂಕಟಗಿರಿಯಪ್ಪ ಮಾತನಾಡಿ, ರೈತರು ಹಾಗೂ ಮಹಿಳಾ ಗುಂಪುಗಳು ಪಡೆದ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸಿದರೆ ಬಡ್ಡಿ ಭಾರವೂ ಕಡಿಮೆಯಾಗುತ್ತದೆ, ಬ್ಯಾಂಕಿಗೂ ಮತ್ತೆ ಬೇರೆಯವರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಸಂಘ ಸಂಘದ ಉಪಾಧ್ಯಕ್ಷ ಜಯಕುಮಾರ್, ನಿರ್ದೇಶಕ ಜಿ.ಮರಳು ಸಿದ್ದಯ್ಯ, ಶಫಿ, ಜಗದೀಶ್ ಕುಮಾರ್, ಜಿ.ವಿ. ಮಲ್ಲಿಕಾರ್ಜುನಯ್ಯ, ನಾಗರಾಜು, ಗೀತಾ ಬಸವರಾಜು, ಕೆ.ಸಿ.ಚಿಕ್ಕಣ್ಣ, ಬಿ.ಎಸ್. ಯತೀಶ್, ವೆಂಕಟಲಕ್ಷ್ಮಮ್ಮ, ಬ್ಯಾಂಕಿನ ಪ್ರತಿನಿಧಿ ಕೆ.ಸಿ.ಧನಂಜಯ, ಚಿಕ್ಕವೆಂಕಟಯ್ಯ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.